Wednesday, January 22, 2025

ಸುಳ್ಳು ಹೇಳಿ ಸಿಎಂ ಆಗಬೇಕಿಲ್ಲ: ಸಚಿವ ಕಾರಜೋಳ

ಬೆಂಗಳೂರು : ಸುಳ್ಳು ಹೇಳಿ ಸಿಎಂ ಆಗಬೇಕಿಲ್ಲ, ಸುಳ್ಳು ಹೇಳಿದವರು ಕಾಂಗ್ರೆಸ್​​​ನವರು ಎಂದು ಮಾಜಿ ಸಿದ್ದರಾಮಯ್ಯ ವಿರುದ್ಧ ಸಚಿವ ಗೋವಿಂದ ಕಾರಚೋಳ ಹರಿಹಾಯ್ದದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮದೊದಿಗೆ ಮಾತನಾಡಿದ ಅವರು ಮೇಕೆದಾಟು ಯೋಜನೆ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಸುಳ್ಳು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ ಹಾಗೂ ಸುಳ್ಳು ಹೇಳಿ ಸಿಎಂ ಕೂಡ ಆಗಬೇಕಿಲ್ಲ. ಸುಳ್ಳು ಹೇಳುವುದು ಕೇವಲ ಕಾಂಗ್ರೆಸ್​​​ನವರು ಮಾತ್ರ. 2013 ರಲ್ಲಿ ಕಾಂಗ್ರೆಸ್ ನಡುಗೆ ಕೃಷ್ಣೆಕಡೆಗೆ ಎಂದು ಪಾದಯಾತ್ರೆ ಮಾಡಿದರು, ಆದ್ರೆ ಆ ಯೋಜನೆಯನ್ನು ಇದುವರೆಗೂ ಜಾರಿಗೆ ತರಲಿಲ್ಲ.

ಇನ್ನು ಉತ್ತರ ಕರ್ನಾಟಕ ಜನತೆಗೆ ಕೂಡ ಕಾಂಗ್ರೆಸ್ ಪಕ್ಷವು ಸುಳ್ಳು ಹೇಳಿದ್ದಾರೆ. ನಾನು ದಾಖಲೆ ಇಟ್ಟು ಮಾತನಾಡಿದ್ದೇನೆ ಬಿಜೆಪಿ ಕಚೇರಿಯಿಂದ ತಂದ ದಾಖಲೆ ಇಟ್ಟಿಲ್ಲ, ನೀವು ಅಧಿಕಾರಕ್ಕೆ ಬರ್ತೀವಿ ಅನ್ನು ಭ್ರಮೆಯಲ್ಲಿ ಇದ್ದೀರಾ ಅಷ್ಟೇ, ಮತ್ತೇ ನಾವು ಅಧಿಕಾರಕ್ಕೆ ಬರುತ್ತೇವೆ, ಆಗ ನೀವು ವಿರೋಧ ಪಕ್ಷದಲ್ಲೇ ಇರಬೇಕು ಎಂದು ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದರು.

RELATED ARTICLES

Related Articles

TRENDING ARTICLES