Sunday, December 22, 2024

ಜಾರಕಿಹೊಳಿ ದೊಡ್ಡ ಲೀಡರ್ : ಮಧು ಬಂಗಾರಪ್ಪ

ಶಿವಮೊಗ್ಗ : ಸತೀಶ್ ಜಾರಕಿಹೊಳಿಯವರು ದೊಡ್ಡ ಲೀಡರ್, ಅವರಿಗೆ ಅಪಾರವಾದ ಅನುಭವ ಇದೆ ಎಂದು  ಶಿವಮೊಗ್ಗದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಮಧು ಬಂಗಾರಪ್ಪ ಚುನಾವಣೆಗೆ 6 ತಿಂಗಳ ಮೊದಲೇ, ಅಭ್ಯರ್ಥಿ ಘೋಷಣೆ ಮಾಡಬೇಕೆಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರ ಹೇಳಿಕೆ ಸಹಮತಿಸಿದ್ದಾರೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ, 6 ತಿಂಗಳ ಮೊದಲೇ ಅಭ್ಯರ್ಥಿ ಘೋಷಿಸಿದರೆ, ಒಳ್ಳೆಯದು. ಚುನಾವಣೆ ಇರುವಾಗ ಅಭ್ಯರ್ಥಿ ಘೋಷಣೆ ಮಾಡಿದರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಮನಸ್ತಾಪ ಹೆಚ್ಚಾಗಿರುತ್ತದೆ. ಆಗ ಅಭ್ಯರ್ಥಿಗಳು ಸೋಲುವುದು ನಿಶ್ಚಿತವಾಗುತ್ತದೆ ಹೀಗಾಗಿ ಮೊದಲೇ ಅಭ್ಯರ್ಥಿಗಳ ಘೋಷಣೆ ಮಾಡಬೇಕು.ಇದರಿಂದ ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸರಿಮಾಡಿಕೊಂಡು ಹೋಗಬಹುದು ಎಂದರು.

ಇನ್ನು ರಾಜ್ಯದ ಮತ್ತು ಕ್ಷೇತ್ರದ ದೃಷ್ಟಿಯಿಂದ ಅಭ್ಯರ್ಥಿಗಳ ಜೊತೆ ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಾರೆ. ಚುನಾವಣೆ ಹೊಸ್ತಿಲಲ್ಲಿ ಘೋಷಣೆ ಮಾಡಿದರೆ, ಎಲ್ಲರಿಗೂ ಕಷ್ಟವಾಗಬಹುದು. ಇನ್ನು ಈ ವೇಳೆ ಸತೀಶ್ ಜಾರಕಿಹೊಳಿಯವರ ಬಗ್ಗೆ ಮಾತನಾಡಿ ದೊಡ್ಡ ಲೀಡರ್, ಅವರ ಅನುಭವ ದೊಡ್ಡದು ಎಂದು ಅವರನ್ನು ಹೊಗಳಿದ್ದಾರೆ.

ಅಲ್ಲದೇ ಇರುವ 624 ಕ್ಷೇತ್ರಗಳಿಗೆ ಮಾಡದೇ ಹೋದರು ಸರಿ ಇರುವುದನ್ನಾದರೂ, ಘೋಷಣೆ ಮಾಡಿದರೆ, ಉತ್ತಮವಾಗಿ ಚುನಾವಣೆ ನಡೆಸಬಹುದಾಗಿದೆ. ಅಧ್ಯಕ್ಷರು, 224 ನ್ನು ಸೂಟ್ ಕೇಸ್​​ನಲ್ಲಿ ಇಟ್ಟುಕೊಂಡು ಓಡಾಡುವ ಬದಲು ಒಂದೊಂದೇ, ಒಂದೊಂದೇ, ಬಿಡುತ್ತಾ ಹೋದರೆ, ಸೂಟ್ ಕೇಸ್ ಲೈಟರ್ ಆಗುತ್ತದೆ ಆಗ ಇವರು ಫಾಸ್ಟರ್ ಆಗುತ್ತಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

RELATED ARTICLES

Related Articles

TRENDING ARTICLES