ಕೆಂಗೇರಿ : ಶಿವಮೊಗ್ಗದಲ್ಲಿ ಯಾವ್ಯಾವ್ ಪೊಲೀಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ಅಂತಾ ನನಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ.
ಇಂದು ಮೇಕೆದಾಟು ಪಾದಯಾತ್ರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಾಗಿಲ್ಲ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ, ಇದು ಸಚಿವ ಗೋವಿಂದ ಕಾರಜೋಳಗೆ ಗೊತ್ತಿಲ್ವಾ? ಎಂದು ವ್ಯಂಗವಾಡಿದ್ದಾರೆ.
ನಾನು ಕೂಡ ಕೆಲ ತಿಂಗಳು ಜಲಸಂಪನ್ಮೂಲ ಸಚಿವನಾಗಿದ್ದೆ, ಎನ್ ಓ ಸಿ ಬೇಕಾಗಿಲ್ಲ ಎಂದು ಹೇಳಿದ್ದಾರೆ ಆದರೂ ಈ ಬಗ್ಗೆ ಸುಮ್ನೆ ಮಾತನಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಯಾವ್ಯಾವ್ ಪೊಲೀಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಹಾಗೂ ಅದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ನೆನಪಿರಲಿ ಎಲ್ಲರಿಗೂ ಹೇಳತ್ತಿದ್ದೇನೆ ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ ಹಾಗೆಯೇ ಸರ್ಕಾರ ಬದಲಾವಣೆಯಾಗುತ್ತಲೇ ಇರುತ್ತದೆ. ರಾಜಕೀಯವಾಗಿ ತೊಂದ್ರೆ ಮಾಡಲು ಸಮಸ್ಯೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಡಿ ಕೆ ಶಿವಕುಮಾರ್ ಎಚ್ಚರಿಕೆ ಕೂಡ ಕೊಟ್ಟರು.
ಇನ್ನು, ಶಿವಮೊಗ್ಗದಲ್ಲಿ ನಡೆದ ಬಂಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಾದಗ 144 ಸೆಕ್ಷನ್ ಜಾರಿ ಇದ್ದರೂ ಈಶ್ವರಪ್ಪ ಹಾಗೂ ,ಅಲ್ಲಿನ ಸಂಸದರು ರ್ಯಾಲಿ ಮಾಡುತ್ತಾರೆ. ಹೇಳಬೇಕು ಅಂದರೆ ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ ಆದರೂ ಇನ್ನು ಅವರ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ. ಈಶ್ವರಪ್ಪ ಸ್ಥಳೀಯ ಶಾಸಕರ ಇದ್ರೆ ಅವರ ಮನಗೆ ಹೋಗಬೇಕಿತ್ತು ಅದನ್ನು ಬಿಟ್ಟು ಯಾರಾದರೂ ರ್ಯಾಲಿ ಮಾಡುತ್ತೇರೇನ್ರಿ..? ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು. ಇನ್ನು ಇದನ್ನ ಸರ್ಮಥನೆ ಮಾಡಿಕೊಳ್ಳೋ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಬ್ಬ ನಾಲಾಯಕ್ ಮತ್ತು ಅನ್ ಫಿಟ್ ಹೋಂ ಮಿನಿಸ್ಟರ್ ಸ್ಥಾನಕ್ಕೆ ಎಂದು ಡಿ ಕೆ ಶಿವಕುಮಾರ್ ಗೃಹ ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.