Wednesday, January 22, 2025

ಬಿಜೆಪಿಗರು ವಿದ್ಯಾರ್ಥಿಗಳ ನಡುವೆ ಮೈಮನಸ್ಸು ಹುಟ್ಟುಹಾಕುತ್ತಾರೆ

ಶಿವಮೊಗ್ಗ :ಹರ್ಷನ ತಾಯಿ ನನ್ನ ಮಗ ಭಜರಂಗದಳ ಕಾರ್ಯಕರ್ತನಾಗಿ ಮುಂದುವರೆಯುದಿಲ್ಲ ಎಂದು ಪೊಲೀಸರಿಗೆ ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿರುತ್ತಾರೆ ಎಂದು ಸುಂದರೇಶ್ ಹೇಳಿದ್ದಾರೆ.

ಹರ್ಷ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿರಲಿಲ್ಲ. ಹರ್ಷ ಹಾಗೂ ಎ1 ಆರೋಪಿ ಖಾಸೀಫ್ ಜೊತೆ ವ್ಯಯಕ್ತಿಕ ಜಗಳವಾಗಿತ್ತು.ನಾಲ್ಕೈದು ವರ್ಷಗಳಿಂದ ಹರ್ಷ ಹಾಗೂ ಖಾಸೀಫ್ ನಡುವೆ ಜಗಳ ಮುಂದುವರೆದಿತ್ತು.ಈ ವೇಳೆ ಬಿಜೆಪಿಯವರು ಮಧ್ಯ ಪ್ರವೇಶ ಮಾಡಿ ಸಂಧಾನ ಮಾಡುವ ಕೆಲಸ ಮಾಡಿಲ್ಲ. ಹರ್ಷನ ಮನೆಗೆ ಹೋಗಿದ್ದಾಗ ನಮ್ಮಗೆ ತುಂಬಾ ನೋವಾಯ್ತು.ಬಡವರ ಮಕ್ಕಳು ಹತ್ಯೆಯಾದಾಗ ಮೆರವಣಿಗೆ ಮಾಡಿ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ತಾರೆ ಎಂದರು.

ವಿಶ್ವನಾಥ್ ಶೆಟ್ಟಿ ಕುಟುಂಬದತ್ತ ಬಿಜೆಪಿಯವರು ಮುಖ ಮಾಡಿಲ್ಲ.ಮೀನಾಕ್ಷಮ್ಮಗೆ ಕಾಂಗ್ರೆಸ್ ಪಕ್ಷದಿಂದ ನೆರವು ನೀಡಲಾಗುವುದು.ಬಿಜೆಪಿ ಹತ್ಯೆಯಾದಾಗ ರಾಜಕೀಯ ಬಳಸಿಕೊಳ್ತಾರೆ.ಓಟ್ ಬ್ಯಾಂಕ್ ಮಾಡಿಕೊಂಡು, ನಂತರ ಅವರ ಕುಟುಂಬದತ್ತ ಮುಖ ಮಾಡಲ್ಲ.ರಾಜಕೀಯ ನಾಯಕರ ಮಕ್ಕಳು ಇಲ್ಲಿವರೆಗೂ ಒಬ್ಬರು ಸಾವನಪ್ಪಿಲ್ಲ. ಬಿಜೆಪಿಯವರು ಹಿಜಬ್ ಇಟ್ಟುಕೊಂಡು ರಾಜೀಕೀಯ ಮಾಡ್ತಾ ಇದ್ದಾರೆ. ಹಾಗೆನೇ ಬಿಜೆಪಿಯವರು ಮಾಧ್ಯಮವನ್ನ ಬಳಸಿಕೊಂಡು ಬರೀ ಸುಳ್ಳು ಹೇಳ್ತಾರೆ. ಬಿಜೆಪಿ ನಾಯಕರ ವಿರುದ್ಧ ಎಫ್.ಐ.ಆರ್. ದಾಖಲಾಗಬೇಕು.ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಮಂತ್ರಿಯಿಂದಲೇ ಈ ರೀತಿ ಘಟನೆ ನಡೆದಿರೋದು.144 ಸೆಕ್ಷನ್ ಒಬ್ಬ ಸಾಮಾನ್ಯ ಪ್ರಜೆಗೂ ಒಂದೇ, ಮಂತ್ರಿಗೂ ಒಂದೇ, ಸಂಸದರಿಗೂ ಒಂದೇ.ಅಧಿಕಾರಿಗಳೇ ಕೂಡಲೇ ಎಫ್ ಐ ಆರ್ ದಾಖಲಿಸಿ.ಇಲ್ಲದಿದ್ದರೆ ಜಿಲ್ಲಾಡಳಿತ ಮೇಲೆ ನಂಬಿಕೆ ಇರೋದಿಲ್ಲ.ಮಂತ್ರಿಯಿಂದಲೇ ಆಸ್ತಿ, ಪಾಸ್ತಿ ನಷ್ಟ ಮಾಡಿದ್ದಾರೆ.ಈಶ್ವರಪ್ಪನ ಹಣದಿಂದ ಆಸ್ತಿ, ಪಾಸ್ತಿ ನಷ್ಟ ತುಂಬಿಸಬೇಕು ಎಂದು ಸುಂದರೇಶ್ ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES