Monday, December 23, 2024

ನಿಮ್ಹಾನ್ಸ್​ನಲ್ಲಿ ಬೆಡ್ ರೆಡಿಮಾಡಿಕೊಡ್ತೀನಿ; ಈಶ್ವರಪ್ಪನಿಗೆ ಡಿಕೆಶಿ ಟಾಂಗ್

ರಾಮನಗರ : ಕಾಂಗ್ರೆಸ್ ಮತ್ತು ಬಿಜೆಪಿಯವರ ವಾಕ್ಸಮರ ದಿನದಿನಕ್ಕೂ ತಾರಕಕ್ಕೇರುತ್ತಿದೆ. ಕಾಂಗ್ರೆಸ್ ನಾಯಕರಿಗೆ ಉದ್ಯೋಗ ಇಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

“ಹೌದು, ಖಂಡಿತ ನಮಗೆ ಉದ್ಯೋಗ ಇಲ್ಲ, ಇಡೀ ದೇಶದ ಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡ್ತಿನಿ ಅಂತಾ ಹೇಳಿದ್ದರು. ಆದರೆ ಕೊಟ್ಟಿಲ್ಲ ಆದ್ದರಿಂದ ಜನರಿಗೆ ಉದ್ಯೋಗ‌ ಕೊಡೊಕೆ ಈ ಹೋರಾಟ ಮಾಡ್ತಿದ್ದೇವೆ. ಒಂದು ಒಳ್ಳೆಯ ಮೆಂಟಲ್ ಆಸ್ಪತ್ರೆ ಶಿವಮೊಗ್ಗದಲ್ಲಿ ಇದ್ರೆ ಹೇಳಿ. ಇಲ್ಲ ಅಂದ್ರೆ ನಾನೇ ನಿಮ್ಹಾನ್ಸ್ ನಲ್ಲಿ ಒಂದು ಬೆಡ್ ರೆಡಿ ಮಾಡ್ಕೊಡ್ತೀನಿ” ಎಂದು ಈಶ್ವರಪ್ಪರನ್ನು ಮೆಂಟಲ್​ಗೆ ಹೋಲಿಸಿ  ಡಿಕೆಶಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES