Wednesday, January 22, 2025

ಕಾಂಗ್ರೆಸ್​ನವರು ಹರ್ಷನ ಮನೆಗೆ ಭೇಟಿ ನೀಡಿದ್ರಾ: ಸಚಿವ ಕೆ.ಎಸ್.ಈಶ್ವರಪ್ಪ

ಮಂಡ್ಯದಲ್ಲಿ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದ ಹೆಣ್ಣು ಮಗಳಿಗೆ ಕಾಂಪಿಟೇಶನ್‌ನಲ್ಲಿ ಹೋಗಿ ದುಡ್ಡು ಕೊಡ್ತಾರೆ. ಅವರು ಕೊಡಲಿ ಬೇಡ ಅನ್ನಲ್ಲ. ಆದ್ರೆ, ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷನ ಮನೆಗೆ ಯಾರಾದ್ರೂ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿದ್ರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಹರ್ಷನ ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ದೇಶದ್ರೋಹಿ ಸಂಘಟನೆಗಳು ಈ ರೀತಿಯ ಕೃತ್ಯ ಮಾಡುತ್ತಿವೆ. ಹಾಗಾಗಿ, ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಇರಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.ಹರ್ಷನ ಅಂತಿಮ ಯಾತ್ರೆ ವೇಳೆ ಗಾಯಗೊಂಡಿದ್ದ ಯುವಕರ ಆರೋಗ್ಯ ವಿಚಾರಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಹರ್ಷನ ಮೃತದೇಹದ ಅಂತಿಮ ಯಾತ್ರೆ ವೇಳೆ ಗಲಭೆ ಮಾಡಿದವರು ಯಾರು?, ಶಿವಮೊಗ್ಗದವರಾ ಅಥವಾ ಹೊರಗಿನವರಾ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಶಾಂತಿ ಸೃಷ್ಠಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

RELATED ARTICLES

Related Articles

TRENDING ARTICLES