Saturday, November 23, 2024

ಸಮಾಜದ ಸಾಮರಸ್ಯ ಹೆಚ್ಚಿಸುವ ರೀತಿಯಲ್ಲಿ ನಡೆನುಡಿ ಇರಲಿ: ಕಾಗೇರಿ

ಬೆಂಗಳೂರು: ಸಮಾಜದ ಸಾಮರಸ್ಯ ಹೆಚ್ಚಿಸುವ ರೀತಿಯಲ್ಲಿ ನಡೆನುಡಿ ಇರಬೇಕೆ ಹೊರತು ವಿವಾದಗಳ ಮಾತುಗಳಿಂದ ನಾಯಕತ್ವ ಬೆಳೆಸಿಕೊಳ್ಳುವ ಉದ್ದೇಶ ಇರಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಒಳ, ಹೊರಗೆ ಆಡುವ ಮಾತುಗಳು, ಭಾವನೆಗಳು ಸಮಾಜದಲ್ಲಿ ಪ್ರೀತಿ ವಿಶ್ವಾಸ ಬೆಳೆಸಲು ಪೂರಕವಾಗಿರಬೇಕು. ಆದರೆ ವಿವಾದಗಳ ಮಾತುಗಳಿಂದಲೇ ನಾಯಕತ್ವ ವೃದ್ದಿಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದರು.

ಸಮಾಜದ ಸಾಮರಸ್ಯ ಕದಡುವಂತೆ ಮಾತನಾಡಿದ ಸಂದರ್ಭದಲ್ಲಿ ಮಾಧ್ಯಮಗಳು ಅದನ್ನು ವೈಭವೀಕರಿಸಬಾರದು. ಸುಸಂಸ್ಕತ ಜನಜೀವನ ನಿರ್ಮಾಣಕ್ಕೆ ಜನಪ್ರತಿನಿಗಳು ಕೊಡುಗೆ ನೀಡಬೇಕು. ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಗೌರವಯುತ ಮಾತುಕತೆ ಆಡಬೇಕು. ಜವಾಬ್ದಾರಿಯ ಅರಿವು ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಮಾತನ್ನು ಯಾವುದೋ ಘಟನೆ ವ್ಯಕ್ತಿ ಹಿನ್ನೆಲೆಯಲ್ಲಿ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಸ್ಪಷ್ಟನೆ ಏನೆ ಕೊಡಲಿ ಅವರ ಈ ಮಾತುಗಳು ಇಂದಿನ ಸಂದರ್ಭದಲ್ಲಿ ಬಿಜೆಪಿಯ ಮೂವರು ಮುಖಂಡರಿಗೆ ಅತಿ ಹೆಚ್ಚಾಗಿ ಅನ್ವಯಿಸುವಂತಿದೆಯಲ್ಲವೆ?

RELATED ARTICLES

Related Articles

TRENDING ARTICLES