Monday, December 23, 2024

ಹರ್ಷ ಕೊಲೆ ಕೇಸ್​​ : 9FIR, 6ಜನರ ಬಂಧನ ಯಾರ ಪಾತ್ರ ಏನು..?

ಬೆಂಗಳೂರು : ಶಿವಮೊಗ್ಗದಲ್ಲಿ ಹಿಂದೂ ಪರ ಸಂಘಟನಾ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಕೇಸ್​​ಗೆ ಸಂಬಂಧಪಟ್ಟಂತೆ 9ಎಫ್‍ಐಆರ್ ದಾಖಲಾಗಿದ್ದು, 6 ಜನರನ್ನು ಬಂಧನ ಮಾಡಲಾಗಿತ್ತು. ಇದೀಗ ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹರ್ಷ ಕೊಲೆ ಪ್ರಕರಣದಲ್ಲಿ, ಕೊಲೆ ನಡೆದ 24 ಗಂಟೆಯಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ, ಜೊತೆಗೆ 12 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಬಂಧಿತ ಆರೋಪಿಗಳು ಶಿವಮೊಗ್ಗ ನಿವಾಸಿಗಳಾಗಿದ್ದಾರೆ. ಇನ್ನುಳಿದ ಕಿರಾತಕರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಎಸ್‌ಪಿ ಲಕ್ಷ್ಮಿಪ್ರಸಾದ್‌ರವರು ಮಾಹಿತಿ ನೀಡಿದ್ದಾರೆ.

ಎ1 -ಕಾಸಿಫ್ : 22 ವರ್ಷದ ಈತ ಶಿವಮೊಗ್ಗದ ಕ್ಲಾರ್ಕ್ಸ್ ಪೇಟೆ ನಿವಾಸಿ.. ಕಾಸಿಫ್ ಗ್ಯಾಂಗ್ ಮತ್ತು ಹರ್ಷನ ಗ್ಯಾಂಗ್​​​ಗೆ 2020 ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಕಾಸಿಫ್ ಹುಡುಗರನ್ನ ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ಮಾಡಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ. ಈತನ ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

ಎ2 – ನದೀಮ್ : 23 ವರ್ಷದ ಈತ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ.. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದೆ.. ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನ ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.

ಎ3 – ಆಸಿಫ್ ಖಾನ್ : 21 ವರ್ಷದ ಈತ ಕೊಲೆ ಮಾಡುವ ಉದ್ದೇಶದಿಂದ ಕಾಸಿಫ್ ನ ಮಾತಿನಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಎರಡನೆಯವಾನಾಗಿರೊ ಅಸಿಫ್ ಖಾನ್.

ಎ4 – ರಿಯಾನ್ ಶರೀಫ್ @ ಖಸಿ :  22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ.. ಕೊಲೆಗೂ ಮೊದಲು ಕಾಸಿಫ್ ನ ಪ್ಲಾನಿಂಗ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ.. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ.

ಎ5- ನಿಹಾನ್ @ ಮುಜಾಹಿದ್ : ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ. ವಯಸ್ಸು ೨೩. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ.. ಸ್ನೇಹಿತರ ಗ್ಯಾಂಗ್ ಜೊತೆ ಇದೇ ಕ್ಲಾರ್ಕ್ ಪೇಟೆಯಲ್ಲಿ ಮೀಟಿಂಗ್ ಮಾಡ್ತಿದ್ದ. ಖಾಸಿಫ್ ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ.. ಚಿಕ್ಕಮಗಳೂರಿನಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದ ಪೊಲೀಸ್ರ ತಂಡ..

ಎ6 – ಅಬ್ದುಲ್ ಅಪ್ನಾನ್ : ವಯಸ್ಸು ಈಗಿನ್ನು 21 ವರ್ಷ. ಕೊಲೆಯಲ್ಲಿ ಡೈರೆಕ್ಟಾಗಿ ಭಾಗಿ ಅಲ್ಲದಿದ್ರೂ ಇನ್ ಡೈರೆಕ್ಟ್ ಆಗಿ ಭಾಗಿ.. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನಾ ಇಲ್ವಾ.? ಹೀಗೆ ಪ್ರತಿಯೊಂದು ಮಾಹಿತಿಯನ್ನ ಖಾಸಿಫ್ ಗೆ ನೀಡ್ತಿದ್ದ ಆರೋಪಿ.. ಕೊಲೆ ಬಳಿಕ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ..

ಎ7 – ಜಿಲಾನ್ : ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನ ಕಾರ್ ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರ್ ನಲ್ಲಿ ಭದ್ರಾವತಿ ಕಡೆ ತೆರಳಿದ್ದ.. ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

RELATED ARTICLES

Related Articles

TRENDING ARTICLES