Monday, December 23, 2024

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಡಿಕೆಶಿ ಅಭಿನಂದನೆ

ಬೆಂಗಳೂರು : ಈಶ್ವರಪ್ಪರನ್ನು ವಜಾ ಮಾಡಿದರೆ ಬಿಜೆಪಿಯ ಗೌರವ ಉಳಿಯುತ್ತದೆ. ಮತ್ತು ಬಿಜೆಪಿ ನಾಯಕರು ಈಶ್ವರಪ್ಪರನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ನಾನು ಅಭಿನಂದಿಸುತ್ತೇನೆ. ಕೊನೆಗೂ ಅವರಿಗೆ ಅರಿವಾಗಿದೆ. ನಿನ್ನೆ ರಾಜ್ಯಪಾಲರ ಬಳಿ ಹೋಗಿ ಈಶ್ವರಪ್ಪರನ್ನು ವಜಾ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ರಾಜ್ಯಪಾಲರು ಏನ್ ತೀರ್ಮಾನ ಮಾಡುತ್ತಾರೆ ನೋಡೋಣ. ರಾಷ್ಟ್ರದ ಬಾವುಟಕ್ಕೆ ಅಗೌರವ ತೋರಬಾರದು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಬೇಕು ಅಷ್ಟೆ ಎಂದಿದ್ದಾರೆ.

ಇನ್ನು ಮಹಾದಾಯಿ ಹೋರಾಟದ ವಿಚಾರವಾಗಿ ಮಾತನಾಡಿ 27 ರಿಂದ ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭ ಆಗುತ್ತದೆ. ರಾಜ್ಯದ ನಾಯಕರು, ಹಾಗೂ ಜನರಿಗೆ ಪಾದಯಾತ್ರೆಗೆ ಆಹ್ವಾನ ನೀಡುವ ಮೂಲಕ ಹೋರಾಟಕ್ಕೆ ಯಾರಾದರೂ ಬರಬಹುದು, ಬಿಜೆಪಿ, ಜೆಡಿಎಸ್ ನಾಯಕರು ಸಹ ಈ ಪಾದಯಾತ್ರೆಗೆ ಬರಬಹುದು ಎಂದರು. ಹಾಗೂ ಭಾನುವಾರ ಎಲ್ಲಾ ಸಂಘ ಸಂಸ್ಥೆಗಳು ಜೊತೆ ಸಭೆ ಇದೆ.

RELATED ARTICLES

Related Articles

TRENDING ARTICLES