ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ ಯುಎಸ್ಇ ನಿಂದ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಪ್ರಣಿತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನೋಡಿದ ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಯುಎಸ್ಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ ಅವಕಾಶಗಳು ಇರುತ್ತೆ. ಆ ಗೌರವವನ್ನು ಕನ್ನಡದ ನಟಿ ಪ್ರಣಿತಾ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.