Wednesday, January 22, 2025

ಅಖಿಲೇಶ್​​ ವಿರುದ್ಧ ಯೋಗಿ ಆರೋಪ

2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಯೊಬ್ಬನ ಮನೆಯ ಸಂಬಂಧಿ ಜೊತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತಯಾಚಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ.

ಅಹಮದಾಬಾದ್‌ ನ್ಯಾಯಾಲಯವು 2008ರ ಸರಣಿ ಸ್ಫೋಟ ಪ್ರಕರಣದಲ್ಲಿ 38 ಭಯೋತ್ಪಾದಕರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿತು. ಅಪರಾಧಿಗಳಿಗೆ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ನೀಡಿತು. ಅವರಲ್ಲಿ ಉತ್ತರ ಪ್ರದೇಶದ ಕೆಲವು ಭಯೋತ್ಪಾದಕರೂ ಇದ್ದಾರೆ. ಅವರಲ್ಲಿ ಒಬ್ಬ ಅಪರಾಧಿಯ ಕುಟುಂಬದ ಸದಸ್ಯನೊಬ್ಬ ಎಸ್‌ಪಿ ಮುಖ್ಯಸ್ಥರೊಂದಿಗೆ ಪಕ್ಷಕ್ಕೆ ಮತ ಕೇಳುತ್ತಿರುವುದು ಕಂಡುಬಂದಿದೆ ಎಂದು ಯೋಗಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES