Wednesday, January 22, 2025

ಸಚಿವ ಈಶ್ವರಪ್ಪರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ: ಪ್ರಿಯಾಂಕ್ ಖರ್ಗೆ

ರಾಷ್ಟ್ರಧ್ವಜಕ್ಕೆ ಬಿಜೆಪಿ ಗೌರವ ಕೊಡಬೇಕೆಂದರೆ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲು ಯಾಕೆ ಆಗುತ್ತಿಲ್ಲ? ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿ ಅದ್ಹೇಕೆ ಕೂತಿದ್ದಾರೆ ಎಂದು ಗೊತ್ತಿಲ್ಲ . ರಾಜೀನಾಮೆ ಕೊಡಲು ಈಶ್ವರಪ್ಪ ಸಿದ್ಧವಿಲ್ಲ ಅಂದ್ರೆ, ಸಿಎಂ ಅವರೇ ವಜಾ ಮಾಡಲಿ. ಬಿಜೆಪಿ ಹೈಕಮಾಂಡ್ ಮತ್ತು ನಳಿನ್​ ಕುಮಾರ್​ ಕಟೀಲ್ ಏನು ಮಾಡುತ್ತಿದ್ದಾರೆ. ನನಗೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ನೋಡಿದರೆ ಅಯ್ಯೋ ಅನಿಸುತ್ತೆ. ಬಿಟ್‌ಕಾಯಿನ್ ವಿಚಾರ ಬಂದರೂ ಬಾಯಿ ಬಿಡಲಿಲ್ಲ. ಕನಿಷ್ಠ ಪ್ರಿಯಾಂಕ್ ಖರ್ಗೆ ಹೇಳಿದ್ದು ಸುಳ್ಳು ಅಂತ ಆದರೂ ಬಾಯಿ ಬಿಡಬೇಕಲ್ಲವೇ? ಎಂದು ಟೀಕಿಸಿದರು.

RELATED ARTICLES

Related Articles

TRENDING ARTICLES