Sunday, December 22, 2024

ವಿಧಾನಸೌಧದ ಕಾರ್ಪೆಟ್ ಮೇಲೆ ಮೈಚೆಲ್ಲಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಜಕಾರಣವೆಂದರೆ ಬರಿ ಹೂವಿನ ಹಾಸಿಗೆಯಲ್ಲ, ಅದು ಮುಳ್ಳಿನಂತೆ ಚುಚ್ಚಲೂಬಹುದು, ಕಲ್ಲಿನಂತೆ ಒತ್ತಲೂಬಹುದು. ಇದಕ್ಕೆ ನಿದರ್ಶನವಾಗಿ ಕರ್ನಾಟಕದಲ್ಲಿ ಈಶ್ವರಪ್ಪನವರನ್ನು ಧ್ವಜದ ಪ್ರಕರಣದಲ್ಲಿ ವಜಾ ಮಾಡಬೇಕು ಮತ್ತು ಅವರ ಮೇಲೆ ಕೇಸ್ ದಾಖಲಿಸಬೇಕು ಎಂದು ಪಟ್ಟು ಹಿಡಿದ ಕಾಂಗ್ರೆಸ್ ಮುಖಂಡರು ವಿಧಾನಸೌಧದ ಸದನದಲ್ಲೇ ಮುಷ್ಕರ ಹೂಡಿದ್ದಾರೆ.

ಅವರ ಈ ಆಹೋರಾತ್ರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಕಾಂಗ್ರೆಸ್​ನ ನಂಬರ್ ಒನ್ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂತಾದವರು ವಿಧಾನಸೌಧದ ನೆಲವನ್ನೇ ಹಾಸಿಗೆಯನ್ನಾಗಿಸಿ ಛತ್ರದಲ್ಲಿ ಮಲಗುವಂತೆ ಮಲಗಿದರು. ಮಲಗುವ ಮುನ್ನ ಕಾಂಗ್ರೆಸ್ ನಾಯಕರಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿನ್ನೆ ನಡೆದ ಭಾರತ ವಿಂಡೀಸ್ ಪಂದ್ಯವನ್ನು ವೀಕ್ಷಿಸಿ ಅದರ ರೋಚಕತೆಯನ್ನೂ ಸಹ ಇದೇ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಅನುಭವಿಸಿದರು.

RELATED ARTICLES

Related Articles

TRENDING ARTICLES