ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಮುಂದೂಡಿದರೆ ನಾವು ಜನರ ಬಳಿ ಹೋಗುತ್ತೇವೆ. ಇದು 130 ಕೋಟಿ ಜನರ ಭಾವನೆಗಳ ವಿಚಾರ. ಇದು ದೇಶದ ಸ್ವಾಭಿಮಾನದ ವಿಚಾರ. ಇಂತಹ ಅವಮಾನ ಮಾಡಿದವರು ಸರ್ಕಾರದಲ್ಲಿ ಇರುವುದು ಹೇಗೆ? ಎಂದು ಪ್ರಶ್ನಿಸಿದರು.
ಸಂವಿಧಾನಕ್ಕೆ ಗೌರವ ಕೊಡದೇ ಈಶ್ವರಪ್ಪನವರು ಮಂತ್ರಿಯಾಗಿ ಹೇಗೆ ಇರುತ್ತಾರೆ ಎಂದು ಪ್ರಶ್ನಿಸಿದ್ರು. ಇನ್ನೂ ರಾಷ್ಟ್ರ ಧ್ವಜಕ್ಕೆ ಡಿ.ಕೆ. ಶಿವಕುಮಾರ್ ಅಪಮಾನ ಮಾಡಿಲ್ಲ. ಶಿವಮೊಗ್ಗದ ವಿಚಾರವನ್ನು ಡಿಕೆಶಿ ಖಂಡನೆ ಮಾಡಿದ್ರು ಎಂದು ಹೇಳಿದ್ದಾರೆ.