Wednesday, January 22, 2025

1 ವರ್ಷ ಸುಮ್ಮನಿರಿ, ಆಮೇಲೆ ನನ್ನ ಟಚ್​​ ಮಾಡೋಕೆ ಆಗಲ್ಲ : ಹೆಚ್​​ ಡಿಕೆ

ರಾಮನಗರ : ಸದನದಲ್ಲಿ ಕಾಂಗ್ರೆಸ್ ನಾಯಕರ ಮಾತುಕಥೆ ವೇಳೆ ದೇವೆಗೌಡ ನನ್ನ ಬಂದು ನೋಡ್ತಿದ್ದ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​​​ಡಿಕೆ ಟಾಂಗ್​​ ನೀಡಿದ್ದಾರೆ.

ದೇವೆಗೌಡರನ್ನು ಬೆಳೆಸಿದ್ದೇ ಸಿದ್ದರಾಮಯ್ಯನವರ ಅಲ್ವ , ಪಾಪ ಜನತಾದಳ ಕುಮಾರಸ್ವಾಮಿ ಕೊಡುಗೆ ಏನು ಅಂತಾ ಕೇಳ್ತಾರೆ. ಜನತಾದಳ‌ 58 ಸೀಟು ಗೆಲ್ಲಬೇಕಾದ್ರೆ ನಂದು ಕೊಡುಗೆ ಇತ್ತು ಆದರೆ ಇವಾಗ ಇಲ್ಲ. 58 ಸೀಟು ಗೆಲ್ಲಿಸಬೇಕಾದ್ರೆ ದೇವೆಗೌಡ್ರು ಬಡ್ಡಿಗೆ ಸಾಲ ತಗೊಂಡು ಬಂದು ಎಲೆಕ್ಷನ್ ಮಾಡಿದ್ದಾರೆ. ಸಿದ್ದರಾಮಯ್ಯ ಅವ್ರ ನಾಯಕತ್ವ ಸರಿ‌ ಇದ್ದಿದ್ರೆ ಅವತ್ತು 50 ಜನ ಯಾಕೆ ನನ್ನ ನಾಯಕತ್ವಕ್ಕೆ ಬಂದಿದ್ದರು, ಎಲ್ಲಾ ಕಾಲದಲ್ಲಿಯೂ  ಯಾರದು ನಡೆಯೋದಿಲ್ಲ, ನಂದು ಅಷ್ಟೇ ಒಂದು ಸಮಯ ನಾನು ಕೂಡ ಹಿಂದಕ್ಕೆ ಸರಿಯಬೇಕಾಗುತ್ತದೆ. ಒಂದೊಂದು ಟೈಮ್ ನಲ್ಲಿ ಒಬ್ಬೊಬ್ಬರದು ನಡೆಯುತ್ತದೆ. ಜನತಾದಳದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಆಕ್ರೋಶದ ಕಿಚ್ಚು ಇದೆ ಎಂದು ಆ ಪದಗಳಲ್ಲಿ ಕಾಣಬಹುದು ಎಂದರು.

ಇನ್ನು, ಸಿದ್ದರಾಮಯ್ಯ ಅವರಿಗೂ ನನಗೂ ರಾಜಕಾರಣದಲ್ಲಿ ಯಾವುದೇ ಕನೆಕ್ಷನ್ ಇಲ್ಲ. ಜನತಾದಳದಲ್ಲಿ ಇದ್ದಾಗಲೂ ನಾನು ಅವರ ಜೊತೆ ಯಾವತ್ತು ಆತ್ಮೀಯವಾಗಿಲ್ಲ. ನಾನು ಅವರ ನಡವಳಿಕೆಯನ್ನು ಹತ್ತಿರದಿಂದ ನೋಡಿದ್ದೇನೆ, ಅವರಿಂದ ನಾನು ಸರ್ಟಿಫಿಕೇಟ್ ತಗೊಳೊ ಅವಶ್ಯಕತೆ ಇಲ್ಲ ಜನ ತೀರ್ಮಾನ ಮಾಡ್ತಾರೆ ಅವರೇ ಸರ್ಟಿಫಿಕೇಟ್ ಕೊಡ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಇನ್ನು 1 ವರ್ಷ ಸುಮ್ಮನಿರಿ, ಮತ್ತೆ ಅಧಿಕಾರ ಪಡೆಯುತ್ತೇನೆ ಆಗ ನನ್ನನ್ನ ಇಳಿಸೋಕೆ ಯಾರಿಂದನೂ ಸಾಧ್ಯ ಆಗಲ್ಲ. ಅಧಿಕಾರ ಇದ್ದರೆ ಅಭಿವೃದ್ಧಿ ಮಾಡಬಹುದು ಅದಕ್ಕಾಗಿ ನಾವು ಯೋಜನೆ ರೂಪಿಸುತ್ತಿದ್ದೇವೆ, ಸುಮ್ಮನ್ನೆ ಕುಳಿತಿಲ್ಲ ಈಗ ಕಳೆ ತೆಗೆಯಲು ಕರೆಸಿಕೊಳ್ತಿದ್ದಾರೆ, ಮುಂದೆ ನೋಡೋಣ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES