Sunday, December 22, 2024

ರಾಜಕೀಯ ಅಭದ್ರತೆ ಕಾಡಿದಾಗ ಈಶ್ವರಪ್ಪ ಈ ರೀತಿ ಮಾತನಾಡ್ತಾರೆ: ಎಚ್ ಎಂ ರೇವಣ್ಣ

ಹುಬ್ಬಳ್ಳಿ: ಈಶ್ವರಪ್ಪನವರ ಬಗ್ಗೆ ನಾನ್ ಹೆಚ್ಚು ಹೇಳೋಕೆ ಹೊಗಲ್ಲ. ಓರ್ವ ಡಿಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡಬಾರದಿತ್ತು.
ಯಾವಾಗ್ಯಾಗ ಅವರಿಗೆ ರಾಜಕೀಯ ಅಭದ್ರತೆ ಕಾಡುತ್ತೊ ಅವಾಗ ಈ ರೀತಿ ಮಾತನಾಡ್ತಾರೆ ಎಂದು ಮಾಜಿ ಸಚಿವ ಎಚ್ ಎಂ ರೇವಣ್ಣ ಈಶ್ವರಪ್ಪ ವಿರುದ್ದ ವಾಗ್ದಾಳಿ ನಡಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಹಿಂದೆಯೂ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಇವಾಗ ಸಂಪುಟದಿಂದ ಹಿರಿಯರನ್ನ ಕೈ ಬಿಡ್ತಾರೆ ಎನ್ನೋ ಸುದ್ದಿ ಇದೆ. ಹೀಗಾಗಿ ದೇಶಭಕ್ತಿ ಉಕ್ಕಿ ಹರಿದಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಮಾಡ್ತಿದ್ದಾರೆ. ರಾಜಕೀಯವಾಗಿ ಸಮಸ್ಯೆ ಆದಾಗ ಅಂದು ರಾಯಣ್ಣ ನೆನಪಿಗೆ ಬಂದ್ರು. ಇಂದು ಧ್ವಜ ನೆನಪಾಗಿದೆ. ಮಹಾನ್ ದೇಶಭಕ್ತನ ರೀತಿ ಮಾತನಾಡ್ತಾರೆ. ತಮ್ಮ ಉಳಿವಿಗಾಗಿ ಏನ್ ಮಾಡಬೇಕು ಅದನ್ನ ಮಾಡ್ತಿದ್ದಾರೆ ಎಂದರು.

RELATED ARTICLES

Related Articles

TRENDING ARTICLES