Wednesday, January 22, 2025

ಹಿಜಾಬ್; ಕಾಂಗ್ರೆಸ್ ನಾಯಕರ ಬೆಂಬಲ ನಮಗಿದೆ!- ರಘುಪತಿ ಭಟ್

ಉಡುಪಿ: ಹಿಜಾಬ್ ವಿಚಾರದಲ್ಲಿ ಎಸ್​ಡಿಪಿಐನಂಥ ಸಂಘಟನೆಗಳಿಗೆ ಉತ್ತರ ಹೇಳುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದ ಮುಸ್ಲಿಮರು ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ. ಹೊರಗಿನಿಂದ ಬಂದವರಿಗೆ ಏಕೆ ಉತ್ತರಿಸಬೇಕು. ಎಸ್​ಡಿಪಿಐನಿಂದ ಪ್ರಶಂಸಾ ಪತ್ರ ಪಡೆಯುವ ಅಗತ್ಯ ನನಗಿಲ್ಲ. ಕಾಂಗ್ರೆಸ್ ನಾಯಕರ ಬೆಂಬಲವೂ ನಮಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಶಾಸಕ ರಘುಪತಿ ಭಟ್ ಅಜ್ಞಾನಿ, ಅನರ್ಹ ಶಾಸಕ ಎಂಬ ಎಸ್​ಡಿಪಿಐ ಆರೋಪದ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದರು. ನಾನೆಂದೂ ಇಸ್ಲಾಮ್ ಧರ್ಮದ ಅಥವಾ ಮುಸ್ಲಿಮರ ಆಚರಣೆ ವಿರುದ್ಧ ಮಾತನಾಡಿಲ್ಲ. ಹೊರಗಿನಿಂದ ಬಂದು ಬೆಂಕಿ ಹಾಕುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಹಿಜಾಬ್ ಬಗ್ಗೆ ಇಸ್ಲಾಮ್​ನಲ್ಲಿ ಉಲ್ಲೇಖವಿದೆ. ಅವರು ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆಡೆ ಹಿಜಾಬ್ ಹಾಕಲಿ ಎಂದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಈ ವಿಷಯದಲ್ಲಿ ಕಾಂಗ್ರೆಸ್ ಬೆಂಬಲ ನಮಗಿದೆ ಎಂದು ಹೇಳಿದ್ದಾರೆ! ಇದು ನಿಜವೋ ಅಥವಾ ಬಿಜೆಪಿ ನಾಯಕರ 2 ಕೋಟಿ ಉದ್ಯೋಗ ಸೃಷ್ಟಿ, ಎಲ್ಲಾ ಬಡವರಿಗೆ ‘ಪಕ್ಕಾ ಮಕಾನ್’ ಎಂಬ ಬಿಜೆಪಿ ಮುಖಂಡರ ಹೇಳಿಕೆಯಂತೆ ಇದೂ ಒಂದು ಸುಳ್ಳು ಹೇಳಿಕೆಯೋ ಎಂಬುದನ್ನು ಇದೀಗ ಕಾಂಗ್ರೆಸಿಗರು ಸ್ಪಷ್ಟಪಡಿಸಬೇಕಿದೆ.

RELATED ARTICLES

Related Articles

TRENDING ARTICLES