Thursday, January 9, 2025

ಅಶ್ಲೀಲ ಪದಗಳಲ್ಲಿ ಈಶ್ವರಪ್ಪ ಸಮರ್ಥನೆ : ಹೆಚ್‌.ಸಿ ಮಹದೇವಪ್ಪ

ಮೈಸೂರು: ಕೆ.ಎಸ್ ಈಶ್ವರಪ್ಪ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಇಲ್ಲವಾದ್ರೆ ಗವರ್ನರ್ ಮಧ್ಯಪ್ರವೇಶಿಸಿ ಸಚಿವ ಸಂಪುಟದಿಂದ ಈಶ್ವರಪ್ಪರನ್ನ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ ಒತ್ತಾಯ ಮಾಡಿದ್ದಾರೆ.

ಈಶ್ವರಪ್ಪ ಒಬ್ಬ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ. ಇವರಿಗೆ ರಾಷ್ಟ್ರ ಧ್ವಜದ ಬಗ್ಗೆ ಗೌರವವಿಲ್ಲ. ಕೇಸರಿ ಧ್ವಜ ಹಾರಿಸುತ್ತೇವೆ ಅನ್ನೋದು ರಾಷ್ಟ್ರದ್ರೋಹಕ್ಕೆ ಸಮ.  ಅಲ್ಲದೇ ಪ್ರತಿಪಕ್ಷಗಳಿಗೆ ಉತ್ತರಿಸಲಾಗದ ಈಶ್ವರಪ್ಪ ಅಶ್ಲೀಲ ಪದ ಬಳಕೆ ಮಾಡ್ತಿದ್ದಾರೆ. ಈಶ್ವರಪ್ಪಗೆ, ಬಿಜೆಪಿ ಪಕ್ಷಕ್ಕೆ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು  ಕೆ.ಎಸ್.ಈಶ್ವರಪ್ಪ ವಿರುದ್ದ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಅಧಿವೇಶನವನ್ನ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸದನದಲ್ಲಿ ಈಶ್ವರಪ್ಪನರ ಮಾತನ್ನೂ ವೀಕ್ಷಣೆ ಮಾಡಿದ್ದಾರೆ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಲಾಗದ ಈಶ್ವರಪ್ಪ ಅಶ್ಲೀಲ ಪದಗಳ ಮೂಲಕ ತನನ್ನ ತಾನೇ ಸಮರ್ಥನೆಗೆ ಮುಂದಾಗಿದ್ದಾರೆ ಇದು ನಿಜಕ್ಕೂ ಖಂಡನೀಯವಾದ ವಿಚಾರವಾಗಿದೆ. ಅಲ್ಲದೇ ಕಲಾಪದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನವನ್ನ ಕೊಲೆ ಮಾಡ್ತಿದ್ದಾರೆ ಜನ ತಕ್ಕಪಾಠ ಕಲಿಸುತ್ತಾರೆ ಎಂದು ನಂಜನಗೂಡಿನಲ್ಲಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES