Sunday, December 22, 2024

ಕೈ ಶಾಸಕರು ರಾಜ್ಯದ್ರೋಹಿಗಳು : ಸಿಎಂ ಬೊಮ್ಮಾಯಿ‌

ಬೆಂಗಳೂರು : ಕಾಂಗ್ರೆಸ್​​ ಪಕ್ಷದ ನಾಯಕರು ಸದನದಲ್ಲಿ‌ ಮಲಗಿ ಮಾಡುತ್ತಿರುವ ಅಹೋರಾತ್ರಿ ಧರಣಿ ವಿಷಯವು ಬಹಳ ಬೇಸರ ತಂದಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿಕೆ ನೀಡಿದ್ದಾರೆ.

ಸಿ ಎಂ ಬೊಮ್ಮಾಯಿ ವಿಧಾನಸಭೆಯಲ್ಲಿ ಮಾತನಾಡಿದ ಅವರು ಈ ರೀತಿ ಇತಿಹಾಸದಲ್ಲಿ ಆಗಿದ್ದನು ನಾನು ಎಮದು ನೋಡಿಲ್ಲ, ಅನೇಕ ಬಾರಿ ಧರಣಿಯಾಗಿದೆ ಆದರೆ ಅದು ಜನರ ಕಷ್ಟಗಳಿಗೆ ಧರಣಿಯಾಗಿದೆ. ರೈತರು ಕೂಲಿಕಾರ್ಮಿಕರ ವಿಷಯವಿಟ್ಟುಕೊಂಡು ಧರಣಿಯಾಗಿದೆ ಅದಕ್ಕೆ ಫಲ ಕೂಡ ಸಿಕ್ಕಿದೆ. ಆದರೆ ಇಂದು ವಿಪಕ್ಷದವರು ಮಾಡುತ್ತಿರುವ ಧರಣಿಯಲ್ಲಿ ಯಾವುದೇ ಜನಹಿತವಿಲ್ಲ ಹಾಗು ಜನಪರ ಧ್ವನಿ ಎತ್ತಬೇಕಾಗಿದ್ದ ಪಕ್ಷವು ತನ್ನ ಜವಾಬ್ದಾರಿಯನ್ನು ಮರೆತಿದೆ ಎಂದು ನೋವಿನಿಂದ ಹೇಳುತ್ತಿದ್ದೇನೆ.

ರಾಜಕೀಯ ಧರಣಿ ಮಾಡುವುದು ಅವರ ರಾಜಕೀಯ ದಿವಾಳಿತನ ಕೆಲ ಸದಸ್ಯರ ವರ್ತನೆಯಿಂದ ಎಲ್ಲಾ ಸದಸ್ಯರ ಅವಕಾಶ ಮೊಟಕಾಗುತ್ತಿದೆ. ಜೆಡಿಎಸ್ ಶಾಸಕರು ಮಾತನಾಡಬೇಕು ಅಂತ ಇದ್ದಾರೆ ಆದರೆ ಅವರಿಗೆ ಅವಕಾಶವೇ ಸಿಗುತ್ತಿಲ್ಲ. ಆಡಳಿತ ಶಾಸಕರು ಕೂಡ ಧ್ವನಿ ಎತ್ತಬೇಕು ಎಂದಿದ್ದಾರೆ.

ಇನ್ನು, ಹಿಜಾಬ್ ವಿಚಾರ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ‌ ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಗೊಂದಲ ನಡೆಯುತ್ತಿದೆ. ಮಕ್ಕಳಲ್ಲಿರುವ ಗೊಂದಲ ದೂರಮಾಡಿ ಮಕ್ಕಳ ಭವಿಷ್ಯ ನಿರ್ಮಿಸಬೇಕು ಆದರೆ ಇವರು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ.ಎಲ್ಲರೂ ಮಕ್ಕಳಿಗೆ ಒಂದು ಸಂದೇಶ ಕೊಡಬೇಕು ಮತ್ತು ಎಲ್ಲರೂ ಸೇರಿ ಗೊಂದಲಕ್ಕೆ ಪರಿಹಾರ ಕೊಡಬೇಕು,. ಆದರೆ ಇಡಿ ಭಾರತ ನೋಡುವ ಸಂಧರ್ಭಗಳಲ್ಲಿ ವಿಚಾರವನ್ನು ಡೈವರ್ಟ್ ಮಾಡುತ್ತಿದ್ದಾರೆ.

ಸ್ಪೀಕರ್ ಖುರ್ಚಿಗು ಕೂಡ ಇವರು ಗೌರವ ನೀಡುತ್ತಿಲ್ಲ ಸಂವಿಧಾನಕ್ಕೂ ಕೂಡ ದ್ರೋಹ ಬಗೆಯುತ್ತಿದ್ದಾರೆ, ರಾಜ್ಯದ ಜನತೆಗೆ,ಮಕ್ಕಳಿಗೆ ದ್ರೋಹ ಬಗೆಯುತ್ತಿದ್ದಾರೆಂದು  ಕೈ ಶಾಸಕರು ರಾಜ್ಯದ್ರೋಹಿಗಳು ಎಂದು ಸಿಎಂ ಬೊಮ್ಮಾಯಿ‌ ಕೈ ನಾಯಕರ ವಿರುದ್ಧ ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES