ಬೆಂಗಳೂರು : ನಮ್ಮ ದುರಂತ ಅಂದ್ರೆ, ಇಡೀ ಭಾರತ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ, ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ ಎಂದು ಅಧಿವೇಶನದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಪರಿಷತ್‍ನಲ್ಲಿ ಈಶ್ವರಪ್ಪ ರಾಷ್ಟ್ರಧ್ವಜ ವಿವಾದಾತ್ಮಕ ಹೇಳಿಕೆ ಚರ್ಚೆ ವೇಳೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ನಾವು. ನಮಗೆ ಯಾವುದೇ ಹಿಡನ್ ಅಜೆಂಡಾ ಇಲ್ಲ. ನಾವು ದೇಶದ್ರೋಹದ ಹೇಳಿಕೆ ಕೊಟ್ಟಿಲ್ಲ. ನಿನ್ನೆ ಎಲ್ಲವನ್ನು ಹೇಳಲಾಗಿದೆ.
ಈಶ್ವರಪ್ಪ ಹೇಳಿಕೆ ಸ್ಪಷ್ಟವಾಗಿ ಇದೆ. ಎಲ್ಲೂ ಕೂಡಾ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ರಾಷ್ಟ್ರಧ್ವಜವೇ ಅಂತಿಮ ಅಂತ ಹೇಳಿದ್ದಾರೆ. ಈ ಘಟನೆ ಇಲ್ಲಿಗೆ ಬಿಡಬೇಕು. ಈಶ್ವರಪ್ಪ ಎಲ್ಲೂ ಕೇಸರಿ ಧ್ವಜ ಹಾರಿಸ್ತೀನಿ ಅಂತ ಹೇಳಿಲ್ಲ. 200, 300 ವರ್ಷಕ್ಕೆ ಆಗಬಹುದು ಅಂತ ಹೇಳಿದ್ದಾರೆ. ಅಷ್ಟು ಹೊತ್ತಿಗೆ ನಾವು ಯಾರು ಇರುವುದಿಲ್ಲ ಈ ವಿಷಯ ಇಲ್ಲಿಗೆ ಬಿಡಬೇಕು ಎಂದು ಮನವಿ ಮಾಡಿಕೊಂಡರು.