Wednesday, January 22, 2025

ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ನಮ್ಮ ಧ್ವಜ ಹಾರಬೇಕು- ಸಿಟಿ ರವಿ

ಬೆಂಗಳೂರು: ಸಿಟಿ ರವಿ ಹೇಳಿಕೆಯೆಂದರೆ ಅದರಲ್ಲಿ ಕೋಮುಸಂಘರ್ಷದ ವಾಸನೆಯಿರಲೇಬೇಕು. ಹಾಗೊಂದು ಅಲಿಖಿತ ನಿಯಮವನ್ನು ಸಿಟಿ ರವಿಯವರು ತಾವಾಗಿಯೇ ಹಾಕಿಕೊಂಡಂತಿದೆ.

ಈಗ ಅವರು ಈಶ್ವರಪ್ಪನವರಿಗೆ ಧ್ವಜ ವಿಷಯವಾಗಿ ಬೆಂಬಲಿಸುತ್ತ ನಮ್ಮದು ಅಖಂಡ ಭಾರತವಾಗಬೇಕು. ಪಾಕಿಸ್ತಾನದ ಇಸ್ಲಾಮಾಬಾದನ್ನೂ ಭಾರತದ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ನಮ್ಮ ಧ್ವಜ ಹಾರಿಸಬೇಕು ಎನ್ನುವ ಆಶಯವಿದೆ ಎಂದು ಭಾವನಾತ್ಮಕವಾಗಿ ಮಾತಾಡುವಂತೆ ಮಾಡಿ ಪಾಕಿಸ್ತಾನವನ್ನು ಯುದ್ಧ ಮಾಡಿ ಸೋಲಿಸಿ ಅದನ್ನು ವಶಪಡಿಸಿಕೊಳ್ಳುವ ಮಾತಾಡಿದರು. ಆದರೆ ಅವರು ಇಸ್ಲಾಮಾಬಾದ್​ನಲ್ಲಿ ನಮ್ಮ ಧ್ವಜ ಹಾರಬೇಕು ಎಂದು ಹೇಳಿದ್ದು ಭಾರತದ ಧ್ವಜವೊ, ಭಗವದ್ವಜವೊ ಎಂಬುದೊ ಅಸ್ಪಷ್ಟ.

ಈಶ್ವರಪ್ಪನವರು ನಮ್ಮ ರಾಷ್ಟ್ರಧ್ವಜವನ್ನು ತೆಗೆದು ಕೇಸರಿ ಧ್ವಜ ಹಾರಿಸುತ್ತೇವೆ ಎಂದಿಲ್ಲ. ಅಷ್ಟಕ್ಕೂ ಭಾಗವದ್ವಜ ನಿಷೇಧಿತ ಧ್ವಜವೇನಲ್ಲ. ಇವರಂತೆ ನಾವು ತುಕ್ಡೆ ಗ್ಯಾಂಗ್​ನವರನ್ನೆಲ್ಲ ಪಾರ್ಟಿಗೆ ಸೇರಿಸಿಕೊಂಡಿಲ್ಲ. ಕನ್ಹಯ್ಯ ಕುಮಾರ್, ಹಾರ್ದಿಕ್ ಪಟೇಲ್ ಸೇರಿ ಹಲವರು ಇವರ ಪಕ್ಷಕ್ಕೆ ಸೇರಿದ್ದಾರೆ. ಹಾಗಾಗಿ ದೇಶಭಕ್ತಿಯನ್ನು ನಾವು ಅವರಿಂದ ಕಲಿಯಬೇಕಿಲ್ಲ ಎಂದು ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES