Sunday, December 22, 2024

ಪ್ರಿಯಾಂಕಾ ಗಾಂಧಿ ಪಂಜಾಬಿನ ಸೊಸೆ ಎಂದ ಸಿಎಂ ಚರಣ್‌ಜಿತ್‌

ಪಂಜಾಬ್‌ಗೆ ಮೋದಿ ಎಂಟ್ರಿಗೆ ತಡೆಯೊಡ್ಡಿದ್ದ ಘಟನೆ ಇನ್ನೂ ಮಾಸಿಲ್ಲ.. ಆ ವಿಚಾರವಾಗಿ ಕೇಂದ್ರ ಸಿಕ್ಕಾಪಟ್ಟೆ ಗಂಭೀರವಾಗಿದೆ.. ಅದಾಗಲೇ ಸಿಎಂ ಚನ್ನಿ ವಿವಾದ ಹುಟ್ಟಿಹಾಕಿದ್ದು, ಮೋದಿ, ಕೇಜ್ರಿವಾಲ್‌, ನಿತೀಶ್‌ ಕುಮಾರ್‌ ಕಿಡಿಕಾರಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಆದ್ರೆ, ಚುನಾವಣಾ ಹೈಡ್ರಾಮಾಗಳಿಗೇನು ಕಮ್ಮಿ ಇಲ್ಲ.. ಕಳೆದ ಬಾರಿ ಮೋದಿ ಪಂಜಾಬ್‌ ಪ್ರವೇಶಕ್ಕೆ ಅಡ್ಡಿಪಡಿಸಲಾಗಿತ್ತು.. ಈ ಘಟನೆ ಮಾಸುವ ಮುನ್ನವೇ ರೋಷಾಭರಿತವಾಗಿ ಮಾತನಾಡಿರುವ ಪಂಜಾಬ್‌ ಸಿಎಂ ಚರಣ್‌ಜಿತ್‌ ಚನ್ನಿ ಉತ್ತರಪ್ರದೇಶ, ಬಿಹಾರ, ದೆಹಲಿ ಭಯ್ಯಾಗಳಿಗೆ ಪಂಜಾಬ್‌ನಲ್ಲಿ ಓಡಾಡಲು ಬಿಡೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ರು..

ಪಂಜಾಬ್​ನಲ್ಲಿ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಭಯ್ಯಾಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂಬ ಹೇಳಿಕೆ ಭಾರೀ ವಿವಾದ ಹುಟ್ಟುಹಾಕಿದೆ. ಚನ್ನಿ ಈ ಹೇಳಿಕೆ ನೀಡಿದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋನಲ್ಲಿ ಅವರ ಪಕ್ಕದಲ್ಲಿದ್ದರು. ಪ್ರಿಯಾಂಕಾ ಗಾಂಧಿ ಪಂಜಾಬಿನ ಸೊಸೆ, ಅವರು ಪಂಜಾಬಿಗಳ ಸೊಸೆ. ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಆಳಲು ಸಾಧ್ಯವಿಲ್ಲ. ಯುಪಿ ಭಯ್ಯಾಗಳಿಗೆ ಪಂಜಾಬ್‌ನಲ್ಲಿ ಸುತ್ತಾಡಲು ನಾವು ಬಿಡುವುದಿಲ್ಲ ” ಎಂದು ಚನ್ನಿ ಪಂಜಾಬಿ ಭಾಷೆಯಲ್ಲಿ ಹೇಳಿದರು. ಪ್ರಿಯಾಂಕಾ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿದರು.

ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಅಬೋಹರ್ ನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಚನ್ನಿ ವಿರುದ್ಧ ಕಿಡಿ ಕಾರಿದ್ರು. ಯುಪಿ, ಬಿಹಾರ ಕೆ ಭಾಯಿ ಹೇಳಿಕೆಗೆ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಕಾಂಗ್ರೆಸ್ ಯಾವಾಗಲೂ ಒಂದು ಪ್ರದೇಶದ ಜನರನ್ನು ಇತರರ ವಿರುದ್ಧ ಎತ್ತಿಕಟ್ಟುತ್ತದೆ ಎಂದು ಗರಂ ಆದ್ರು.

ಪಂಜಾಬ್‌ಗೆ ಬಿಹಾರದ ಜನರು ನೀಡಿರುವ ಕೊಡುಗೆ ಎಷ್ಟು ಮತ್ತು ಅಲ್ಲಿ ಎಷ್ಟು ಜನರು ವಾಸಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ನವರಿಗೆ ತಿಳಿದಿದೆಯೇ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ. ಇನ್ನು, ಪ್ರಿಯಾಂಕಾ ಗಾಂಧಿ ಕೂಡ ಉತ್ತರ ಪ್ರದೇಶಕ್ಕೆ ಸೇರಿದವರು. ಆದ್ದರಿಂದ ಅವರನ್ನು ಬರಲು ಬಿಡಬಾರದು ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ ಮಾಡಿದ್ರೆ, ದೇಶ ವಿಭಜಸಿಲು ಪ್ರಯತ್ನಿಸುತ್ತಿದ್ದಾರೆ ಅಂತ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆಕ್ರೋಶ ಹೊರ ಹಾಕಿದ್ರು.

ಇಷ್ಟೆಲ್ಲಾ ವಿವಾದ ಉಂಟಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹಾಗು ಚರಣ್‌ಜಿತ್‌ ಸಿಂಗ್‌ ಚನ್ನಿ, ನಾವು ಆ ರೀತಿ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಅಂತ ಚನ್ನಿ ಸಬೂಬು ನೀಡಿದ್ದಾರೆ. ಒಟ್ನಲ್ಲಿ, ಕಾಂಗ್ರೆಸ್‌ ಅಖಾಡದಲ್ಲಿ ಮೋದಿ ಹವಾ ಸೃಷ್ಠಿಸೋಕೆ ಪ್ರಯತ್ನಿಸ್ತಿದ್ದಾರೆ, ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್‌ ಪ್ರತಿತಂತ್ರ ರೂಪಿಸ್ತಿದ್ದು, ಮತದಾರರನ್ನು ಓಲೈಕೆ ಮಾಡಲು ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸ್ತಿದ್ದಾರೆ..

RELATED ARTICLES

Related Articles

TRENDING ARTICLES