Monday, December 23, 2024

ನಾನು ಅಪ್ಪಟ ರಾಷ್ಟ್ರಭಕ್ತ- ಈಶ್ವರಪ್ಪ

ಬೆಂಗಳೂರು: ಯಾರು ರಾಷ್ಟ್ರದ್ರೋಹ ಮಾಡಿದ್ದಾರೋ ಅವರು ರಾಜಿನಾಮೆ ಕೊಡಲಿ.. ರಾಷ್ಟ್ರಧ್ವಜ ಇಲ್ಲದೇ ಇರೋದನ್ನ ಇದೆ ಅಂತಾ ಹೇಳಿ ಸಮಸ್ಯೆ ಸೃಷ್ಟಿಸಿದವರು ಡಿಕೆಶಿ ಹೀಗಾಗಿ ಅವರೇ ರಾಜಿನಾಮೆ ಕೊಡಲಿ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಕೆಂಪು ಕೋಟೆಯಲ್ಲಿ 200 ರಿಂದ 300 ವರ್ಷದಲ್ಲಿ ಹಾರಿಸಬಹುದು ಅಂತಾ ಹೇಳಿದ್ದೀವಿ ಅಷ್ಟೇ. ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ಭಯವಿಲ್ಲದೇ ಮುರುಳಿ ಮನೋಹರ ಜೋಷಿ, ನರೇಂದ್ರ ಮೋದಿಯವರ ಮೂಲ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಿ ಬಂದವನು ನಾನು, ರಾಷ್ಟ್ರಭಕ್ತನಾದ ನಾನು ರಾಜೀನಾಮೆಯನ್ನು ಕೊಡೊ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES