Monday, December 23, 2024

ಕಾಮನ್ ಸಿಎಂಗೂ ಶುರುವಾಯಿತು ಅಸಮಾಧಾನ ಕಾಟ

ಬೆಂಗಳೂರು: ಬೊಮ್ಮಾಯಿಗೆ ಇದೀಗ ಎಂಎಲ್ಎ ಗಳು ಅಸಮಾಧಾನ ವ್ಯಕ್ತಪಡಿಸಿದ್ದು, 15ಕ್ಕೂ ಹೆಚ್ಚು ಶಾಸಕರಿಂದ ರಹಸ್ಯ ಸಭೆಯನ್ನು ಏರ್ಪಡಿಸಲಾಗಿದೆ.

ಶಾಸಕರ ಮನೆಯೊಂದರಲ್ಲಿ ಊಟದ ನೆಪದಲ್ಲಿ 15ಕ್ಕೂ ಹೆಚ್ಚು ಎಂಎಲ್ಎಗಳು ಸಚಿವ ಸ್ಥಾನ, ನಿಗಮ ಮಂಡಳಿ ಗಾದಿ ಸಿಗದ ಶಾಸಕರಿಂದ ಪ್ರತ್ಯೇಕ ಸಭೆ ನಡೆಸಿದ್ದು, ಬಿಜೆಪಿ ಶಾಸಕಾಂಗ ಸಭೆ ಕರೆಯುವಂತೆ ಪಟ್ಟು ಹಾಕಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದು, ನಮ್ಮ ಸರ್ಕಾರವಿದ್ರು‌ ಸಚಿವರ ಅಪೀಸ್ ಮೆಟ್ಟಿಲು ಹತ್ತಬೇಕು ಅವರ ಅಪೀಸ್ ಗೆ ಹೋದ್ರು ನಮ್ಮ ಕೆಲಸ ಅಗ್ತಿಲ್ಲ.ಇತ್ತ ಚುನಾವಣೆ ಹತ್ತಿರ ಬರ್ತಿದೆ ಹೀಗೆ ಅದ್ರೆ ನಾವು ಜನರತ್ತಿರ ಯಾವ ಮುಖ ಇಟ್ಕೊಂಡು ಹೋಗಬೇಕು ಇದಕ್ಕೆಲ್ಲ ಅಂತ್ಯ ಹಾಡಲೇಬೇಕು ಎಂದು ಶಾಸಕ‌ ಮಸಾಲಾ ಜಯರಾಂ ಮನೆಯಲ್ಲಿ ಊಟದ ನೆಪದಲ್ಲಿ ಮಾತುಕತೆಯನ್ನು ನಡೆಸಲಾಗುತ್ತದೆ.

RELATED ARTICLES

Related Articles

TRENDING ARTICLES