Thursday, December 19, 2024

ಪಕ್ಷದ ಶಿಸ್ತಿನ ಪಾಠ ಹೇಳಿಸಿಕೊಂಡು ಸೈಲೆಂಟಾದ ಜಮೀರ್

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಪಕ್ಷದ ಸೂಚನೆ ಮೀರಿದರೆ ಮುಲಾಜಿಲ್ಲದೆ ಕ್ರಮ‌ ಎಂದು ಡಿಕೆಶಿ ಎಚ್ಚರಿಸಿದ್ದಾರೆ.

ನಾನು ಹಾಗೆ ಹೇಳಿದಲ್ಲ ಎಂದು ಸಮಜಾಯಿಸಿ ಕೊಡಲು ಮುಂದಾದ ಜಮೀರ್ ಎಲ್ಲಾ ಗೊತ್ತಿದೆ ಪಕ್ಷದ ಅಧ್ಯಕ್ಷನಾಗಿ ಮೊದಲೆ‌ ಹೇಳಿದ್ದೆ ಯಾರು ಮಾತನಾಡಬಾರದು ಅಂತ ಆದರೂ ನೀವು ಮಾತನಾಡಿದ್ದೀರ. ಸ್ಪಷ್ಟನೆ ಪಡೆಯುತ್ತೇನೆ ಅವರು ಕ್ಷಮೆ ಕೇಳಬೇಕು. ಆದರೆ ನಾನು ಯಾರ ಬಳಿಯೂ ಕ್ಷಮೆ‌ ಕೇಳಲ್ಲ ಅಂತ ಬಾಯಿಗೆ ಬಂದಂತೆ ಮಾತಾಡ್ತೀರ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ಪಕ್ಷ ಮೊದಲು ಆಮೇಲೆ ವ್ಯಕ್ತಿ, ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ ಎಂದು ಗದರಿದ ಡಿಕೆಶಿ, ಅಷ್ಟರಲ್ಲಿ ಮಧ್ಯ ಪ್ರವೇಶ ಮಾಡಿ ಜಮೀರ್ ಗೆ ಪಕ್ಷದ ಶಿಸ್ತಿನ ಪಾಠ ಮಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇಲ್ಲಾ ಇಲ್ಲಾ ಎಲ್ಲೂ ಮಾತಾಡಲ್ಲ ಎಂದು ಸಮಜಾಯಿಶಿ ನೀಡಿದ ಜಮೀರ್ ಅಹಮ್ಮದ್ ಖಾನ್,ಕಾಂಗ್ರೆಸ್ ಪಕ್ಷದ ಶಿಸ್ತಿನ ಬಗ್ಗೆ ಅನಗತ್ಯ ಮಾತನಾಡದಂತೆ ಸಭೆಯಲ್ಲಿ ಜಮೀರ್ ಗೆ ಹಿರಿಯ ನಾಯಕರುಗಳು ಬುದ್ಧಿವಾದ ಹೇಳಿದರು.

RELATED ARTICLES

Related Articles

TRENDING ARTICLES