Monday, December 23, 2024

‘ಬಿಜೆಪಿಯಿಂದ ತನಿಖಾ ಅಸ್ತ್ರ’

ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಅದರ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಲು ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.

ನನ್ನನ್ನು ಟಾರ್ಗೆಟ್ ಮಾಡಿದ ದಿನ ಮತ್ತು ನನ್ನ ಆಪ್ತರ ಮೇಲೆ ದಾಳಿ ಮಾಡಿದಂದು ರಾತ್ರಿ ನಾನು ಅಮಿತ್ ಶಾಗೆ ಕರೆ ಮಾಡಿದೆ. ನಾನು ನಿಮಗೆ ಗೌರವ ನೀಡುತ್ತೇನೆ. ನೀವು ದೇಶದ ದೊಡ್ಡ ನಾಯಕ ಮತ್ತು ಗೃಹ ಮಂತ್ರಿ, ಆದರೆ ಏನು ನಡೆದೆದಿಯೋ ಅದು ಸರಿಯಲ್ಲ. ನಿಮಗೆ ನನ್ನೊಂದಿಗೆ ಯಾವುದೇ ದ್ವೇಷವಿದ್ದರೆ ನನ್ನನ್ನು ಗುರಿಯಾಗಿಸಿ, ನನಗೆ ಚಿತ್ರಹಿಂಸೆ ನೀಡಿ, ಕೇಂದ್ರ ಏಜೆನ್ಸಿಗಳು ನನ್ನ ಸ್ನೇಹಿತರು ಮತ್ತು ಸಂಬಂಧಿಕರನ್ನು ಏಕೆ ಗುರಿಯಾಗಿಸುತ್ತಾರೆ? ಎಂದು ನಾನು ಕೇಳಿದ್ದೆ ಅಂದಿದ್ದಾರೆ.

RELATED ARTICLES

Related Articles

TRENDING ARTICLES