ಒಂದು ಶಾಲೆಯಲ್ಲಿ ಆದ ಹಿಜಾಬ್ ಗಲಾಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿ ಆಗಿದೆ. ಕೊರೋನಾ ನಂತ್ರ ಜಾಸ್ತಿ ಹವಾ ಕ್ರಿಯೇಟ್ ಮಾಡಿದ್ದು ಅಂದ್ರೆ ಇದೇ ಅನ್ಸುತ್ತೆ.ಯಾಕೆಂದರೆ ದಿನ ಬೆಳಗಾದ್ರೆ ಸಾಕು ಶಾಲೆಯ ಮುಂದೆ ಗಲಾಟೆ, ಕೂಗಾಟ. ಆದ್ರೆ, ಸಿಲಿಕಾನ್ ಸಿಟಿ ಮಾತ್ರ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ನಗರದಲ್ಲಿನ ಶಾಲೆಗಳಲ್ಲಿ ಯಾವುದೇ ಗಲಾಟೆ ಗದ್ದಲ ಇಲ್ದೆ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು 1 ರಿಂದ 10ನೇ ತರಗತಿಯವರೆಗಿನ ಶಾಲೆಗಳು ಆರಂಭವಾಗಿವೆ.
ಇನ್ನೂ ಬುಧವಾರದಿಂದ ಎರಡನೇ ಹಂತ ಅಂದ್ರೆ ಪಿಯು, ಡಿಗ್ರಿ, ಸ್ನಾತಕೋತ್ತರ ಕಾಲೇಜು ಓಪನ್ ಆಗಲಿದೆ. ಶಾಲೆ ಸುತ್ತಲೂ ಪೊಲೀಸ್ ಬಂದೋಬಸ್ತ್ ಜೊತೆಗೆ 144 ಸೆಕ್ಷನ್ ಜಾರಿ ಇರಲಿದೆ.ಶಾಲೆಯ 200 ಮೀಟರ್ ಯಾರೂ ಮಕ್ಕಳು,ಬರೋದಕ್ಕೆ ಅವಕಾಶ ಇಲ್ಲ.ಪೋಷಕರು ಮಕ್ಕಳನ್ನು ಅಲ್ಲೇ ಬಿಟ್ಟು ಹೋಗ್ಬೇಕು. ಅಲ್ದೆ ಶಾಲೆಗಳಿಗೆ ಎಸಿ, ಶಿಕ್ಷಣ ಅಧಿಕಾರಿಗಳು ವಿಸಿಟ್ ಮಾಡ್ಬೇಕು.ಯಾವುದೇ ಅಹಿತಕರ ಘಟನೆ ಆಗದಂತೆ ಭದ್ರತೆ ನೋಡಿಕೊಳ್ಳಬೇಕಾಗಿದೆ. ಆದ್ರೆ, ಒಂದು ಸಮಾಧಾನ ಅದರೆ ಗಾರ್ಡನ್ ಸಿಟಿಯಲ್ಲಿ ಇದುವರೆಗೆ ಯಾವುದೇ ಹಿಜಾಬ್ ಗಲಾಟೆ ನಡೆದಿಲ್ಲ. ಶಿಕ್ಷಣ ಇಲಾಖೆಯ ಆದೇಶದಂತೆ ಬಂದು ಮಕ್ಕಳು, ಶಾಲೆಗಳಿಗೆ ಬರುತ್ತಿದ್ದಾರೆ.
ಚಂದ್ರಾ ಲೇಜೌಟ್‌ನಲ್ಲಿ ವಿದ್ಯಾಸಾಗರ ಶಾಲೆ ಹಿಜಾಬ್ ಗಲಾಟೆ ಅಂತ ಸುದ್ಧಿಯಾಗಿತ್ತು. ಆದ್ರೆ,ಇದರ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಹಿಜಾಬ್ ಗಲಾಟೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ಕಿಡಿಗೇಡಿಗಳು ಸೃಷ್ಟಿ ಮಾಡಿದ್ದಾರೆ. ಅವಕಾಶ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಒಟ್ಟಿನಲ್ಲಿ ಐಟಿಸಿಟಿಯ ಶಾಲಾ ಮಕ್ಕಳು ಯಾವುದೇ ಭಯವಿಲ್ಲದೆ ಶಾಲೆಗಳತ್ತ ಮುಖ ಮಾಡಿದರೆ, ಇತ್ತ ಬುಧವಾರ ಕಾಲೇಜುಗಳ ಓಪನ್‌ಗೆ ಶಿಕ್ಷಣ ಇಲಾಖೆ ಭರದ ಸಿದ್ದತೆ ಮಾಡಿಕೊಂಡಿದೆ.