Wednesday, January 8, 2025

ಪ್ರೇಮಿಗಳ ದಿನಕ್ಕೆ ದೊಡ್ಮನೆ ಧೀರೇನ್ ಪ್ರೀತಿಯ ಮಳೆ

ಅಣ್ಣಾವ್ರ ಕುಟುಂಬ ದೊಡ್ಮನೆಯಿಂದ ಮತ್ತೊಂದು ಪ್ರತಿಭೆ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡ್ತಿದೆ. ರಾಮ್​ಕುಮಾರ್ ಮುದ್ದಿನ ಮಗ ಧೀರೇನ್, ಚೊಚ್ಚಲ ಚಿತ್ರದಲ್ಲೇ ಸಖತ್ ಹಾಟ್ ಆಗಿ ಪಡ್ಡೆ ಹುಡ್ಗರ ನಿದ್ದೆ ಕೆಡಿಸೋ ರೇಂಜ್​ಗೆ ಸದ್ದು ಮಾಡಲಿದ್ದಾರೆ. ಪ್ರೇಮಿಗಳ ದಿನಕ್ಕೆ ರಿವೀಲ್ ಮಾಡಿರೋ ಸಾಂಗ್ ನೋಡಿದ್ರೆ ನೀವು ದಂಗಾಗೋದು ಗ್ಯಾರೆಂಟಿ.

ಪ್ರೇಮಿಗಳ ದಿನಕ್ಕೆ ದೊಡ್ಮನೆ ಧೀರೇನ್ ಪ್ರೀತಿಯ ಮಳೆ; ಹಾಟ್ ಹೀರೋ ಆಗಿ ಸ್ಯಾಂಡಲ್​ವುಡ್​ಗೆ ಬಿಗ್ ಎಂಟ್ರಿ

ಯೆಸ್.. ಇದು ಪ್ರೇಮಿಗಳ ದಿನಕ್ಕಾಗಿಯೇ ಕಾಯ್ತಿದ್ದ ಸ್ಪೆಷಲ್ ಸಾಂಗ್ ಝಲಕ್. ಪ್ರೀತ್ಸೋ ಹೃದಯಗಳಿಗೆ, ಭಗ್ನ ಪ್ರೇಮಿಗಳಿಗೆ, ಹೊಸದಾಗಿ ಪ್ರೀತಿಯಲ್ಲಿ ಬೀಳೋರಿಗೆ ಕನೆಕ್ಟ್ ಆಗೋ ಅಂತಹ ರೊಮ್ಯಾಂಟಿಕ್ ನಂಬರ್. ಶಿವ 143 ಚಿತ್ರದ ಆಲ್ಬಮ್​ನ ಫಸ್ಟ್ ಸಾಂಗ್ ಇದಾಗಿದ್ದು, ಪಡ್ಡೆ ಹುಡ್ಗರ ನಿದ್ದೆ ಕೆಡಿಸಿದೆ ಈ ದೃಶ್ಯಗುಚ್ಚ.

ಅಣ್ಣಾವ್ರ ಕುಟುಂಬದ ಕುಡಿ ಧೀರೇನ್ ರಾಮ್​ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಇದಾಗಿದ್ದು, ಇದರಿಂದಲೇ ಅವ್ರ ಸಿನಿಯಾನ ಶುರುವಾಗ್ತಿರೋದು ವಿಶೇಷ. ಧೀರೇನ್ ಜೊತೆ ನಾಯಕಿಯಾಗಿ ಟಗರು ಪುಟ್ಟಿ ಮಾನ್ವಿತಾ ಬಣ್ಣ ಹಚ್ಚಿದ್ದು, ಇವ್ರ ರೊಮ್ಯಾನ್ಸ್​ ನೆಕ್ಸ್ಟ್ ಲೆವೆಲ್​ಗಿದೆ. ಸಿನಿಮಾದ ಕಥೆ ಡಿಮ್ಯಾಂಡ್ ಮಾಡಿದಂತೆ ಪಾತ್ರಗಳಿಗೆ ಜೀವ ತುಂಬೋ ಕಾರ್ಯ ಮಾಡಿದ್ದಾರೆ ಧೀರೇನ್- ಮಾನ್ವಿತಾ.

ಟಗರು ಪುಟ್ಟಿ- ಧೀರೇನ್ ಶೃಂಗಾರಕ್ಕೆ ಪ್ರೇಕ್ಷಕ ನಿಟ್ಟುಸಿರು; ಜಯಣ್ಣ ಫಿಲಂಸ್- ಅನಿಲ್ ಕಾಂಬೋನ ‘ಶಿವ 143’

ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿರೋ ಈ ಹಾಡಿಗೆ ಚಿತ್ರದ ಡೈಲಾಗ್ ರೈಟರ್ ಕಮ್ ಅಸೋಸಿಯೇಟ್ ಡೈರೆಕ್ಟರ್ ಕ್ರಾಂತಿ ಕುಮಾರ್ ಸಾಹಿತ್ಯ ಒದಗಿಸಿದ್ದಾರೆ. ಕ್ರಾಂತಿ ಕುಮಾರ್​​ರ ಚೊಚ್ಚಲ ಗೀತರಚನೆ ಇದಾಗಿದ್ದು, ಸಾಹಿತ್ಯದಲ್ಲೇ ಶೃಂಗಾರದ ಹಾಡಿನ ಅರ್ಥೈಸೋ ಪದಪುಂಜ ಪೋಣಿಸಿದ್ದಾರೆ. ನಿಹಾಲ್ ಹಾಗೂ ಪೃಥ್ವಿ ಭಟ್ ಗಾಯನವಿರೋ ಇದು ರೊಮ್ಯಾಂಟಿಕ್ ಗೀತೆಗಳ ಌಂಥೆಮ್ ಆದ್ರೂ ಅಚ್ಚರಿಯಿಲ್ಲ ಅನ್ನೋ ರೇಂಜ್​ಗಿದೆ.

ಸಿನಿಮಾಟೋಗ್ರಫರ್ ಶಿವ ಬಿಕೆ ಕುಮಾರ್ ಕ್ಯಾಮೆರಾ ಕೈಚಳಕದಲ್ಲಿ ಮೂಡಿಬಂದಿರೋ ಈ ಹಾಡನ್ನ ಮಂಡ್ಯ, ಮೈಸೂರಿನಲ್ಲಿ ಚಿತ್ರಿಸಲಾಗಿದೆ. ಮುತ್ತಿನ ಸುರಿಮಳೆ ಆಗಿರೋ ಈ ಹಾಡಿನ ಮೂಲಕ ಶಿವ 143 ಚಿತ್ರದ ಪ್ರಮೋಷನ್ಸ್ ಶುರು ಮಾಡಿದೆ ಚಿತ್ರತಂಡ. ಜಯಣ್ ಫಿಲಂಸ್ ಬ್ಯಾನರ್​ನಡಿ ಧೀರೇನ್ ಇಂಟ್ರಡ್ಯೂಸ್ ಆಗ್ತಿದ್ದು, ದಿಲ್​ವಾಲಾ ಅನಿಲ್ ಌಕ್ಷನ್ ಕಟ್ ಹೇಳಿದ್ದಾರೆ.

ಟಗರು ಪುಟ್ಟಿ ಮಾನ್ವಿತಾ ಸಿಕ್ಕಾಪಟ್ಟೆ ಬೋಲ್ಡ್ ರೋಲ್​ಗಳನ್ನ ಮಾಡಿದ್ರು. ಆದ್ರೆ ಇದ್ರಲ್ಲಿ ಹಾಟ್ ಗ್ಲಾಮರ್ ಡಾಲ್ ಆಗಿ ಕಾಣಸಿಗ್ತಾರೆ. ಮಡಿ ಮೈಲಿಗೆ ಅನ್ನೋ ಅನ್ನೋರು ಇದನ್ನ ನೋಡೋಕೆ ಹಿಂದೇಟು ಹಾಕಬಹುದು. ಆದ್ರೆ ಸಿನಿಮಾ ನೋಡಿದ ಮೇಲೆ ಅಣ್ಣಾವ್ರ ಮೊಮ್ಮಗ ಹೀಗೆ ರೊಮ್ಯಾನ್ಸ್ ಮಾಡಿದ್ದಕ್ಕೆ ಸ್ಪಷ್ಟತೆ ಸಿಗಲಿದೆ.

ಧೀರೇನ್ ಸಹೋದರಿ ಧನ್ಯಾ ರಾಮ್​ಕುಮಾರ್ ನಟನೆಯ ನಿನ್ನ ಸನಿಹಕೆ ಸಿನಿಮಾಗೂ ಮೊದಲೇ ರಿಲೀಸ್ ಆಗಬೇಕಿತ್ತು ಶಿವ 143. ಆದ್ರೆ ಕೊರೋನಾದಿಂದಾಗಿ ರಿಲೀಸ್ ಡೇಟ್​ನ ಅನೌನ್ಸ್ ಮಾಡದೆ ಸೈಲೆಂಟ್ ಆಗಿದ್ದ ಟೀಂ, ಇದೀಗ ದಿಢೀರ್ ಅಂತ ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್ ಸಾಂಗ್​ನ ಲಾಂಚ್ ಮಾಡಿ ಪ್ರಮೋಷನ್ಸ್ ಆರಂಭಿಸಿದೆ. ಇದ್ರಿಂದ ಸ್ಯಾಂಡಲ್​ವುಡ್​ಗೆ ಹೊಸ ಹೀರೋ ಉದಯಿಸಲಿದ್ದಾನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES