ಬೆಂಗಳೂರು : ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ನೀಡಿರುವ ಸರ್ಕಾರ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿದೆ. ಈ ಬಗ್ಗೆ ನಾವು ಯಾವ ರೀತಿಯ ಹೋರಾಟ ಕೈಗೊಳ್ಳಬಹುದು ಎಂಬ ಕುರಿತು ಚಿಂತನೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಿನ್ನೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದನ್ನು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ರಾಜ್ಯಪಾಲರ ಭಾಷಣ ಬರೀ ಶೂನ್ಯ, ಒಂದು ಪೇಪರ್ ಓದಿದ್ದಾರೆ ಎಂದು ಟೀಕಿಸಿದರು. ದೇಶದ ಐಕ್ಯತೆ, ಶಾಂತಿಗೋಸ್ಕರ ಸಾಕಷ್ಟು ಮಹನೀಯರು ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು, ಒಂದು ರಾಷ್ಟ್ರ ಧ್ವಜವನ್ನು ನೀಡಿದರು. ಅದನ್ನು ತೆಗೆದು ಹಾಕಿ ಕೇಸರಿ ಧ್ವಜ ಏರಿಸಬೇಕು ಎಂದು ಒಬ್ಬ ಮಂತ್ರಿ ಮಾತನಾಡಿದ್ದು, ಆ ಬಗ್ಗೆ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.