Wednesday, January 22, 2025

ಯು ಟಿ ಖಾದರ್ ನಿಜವಾದ ಮೂರ್ಖ : ಪ್ರತಾಪ್​​ ಸಿಂಹ

ಮೈಸೂರು : ಮೂರ್ಖರ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂಬ ಯು.ಟಿ.ಖಾದರ್ ಹೇಳಿಕೆ‌ಗೆ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ.

ಉಳ್ಳಾಲದ‌ ಮುಲ್ಲಾ ಖಾದರ್‌ಗೆ ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ. ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತಾನು ಗೊತ್ತಿಲ್ವಎಂದು ಕಿಡಿಕಾರಿದ್ದಾರೆ. ಅಲ್ಲದೇ ನಿಜವಾದ ಮೂರ್ಖತನ ಪ್ರದರ್ಶನ ಮಾಡ್ತಿರೋದು ಖಾದರ್​​ ಎಂದರು.

ಇನ್ನು, ಹಿಜಾಬ್​​ ವಿಚಾರವಾಗಿ ಮಾತಾನಾಡಿ ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರ್ತಾರೆ. ಕ್ಲಾಸ್ ರೂಂ‌ನಲ್ಲಿ ಪ್ರೇಯರ್‌‌ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದಿನ  ದೇಶ ತುಂಡು ಮಾಡಿ ಅಂತಾ ಕೇಳುತ್ತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು ಎಂದು ಗುಡುಗಿದರು.

ಅಲ್ಲದೇ ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ, ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ ಈ ಜಾತಿ , ಆ ಧರ್ಮ ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸರ್ಕಾರವು ಸಮವಸ್ತ್ರವನ್ನು ಜಾರಿಗೊಳಿಸಿದೆ.
ಇದನ್ನ ಅರ್ಥ ಮಾಡಿಕೊಳ್ಳುವ ಕನಿಷ್ಡ ಜ್ಞಾನ ಇಲ್ಲ ಅಂದ್ರೆ ಅದು ಖಾದರ್​​ಗೆ ಮಾತ್ರ ಸಾಧ್ಯ, ಅಲ್ಲದೇ ಈ ಸಮಸ್ಯೆ ಕಾಂಗ್ರೆಸ್​​ಗೆ ಮಾತ್ರ, ಅದು‌ ನಮ್ಮ ಸಮಸ್ಯೆ ಅಲ್ಲ ಎಂದು ಯು.ಟಿ.ಖಾದರ್ ವಿರುದ್ದ ಸಂಸದ ಪ್ರತಾಪ್‌ಸಿಂಹ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES