Friday, December 27, 2024

ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡೋದಿಲ್ಲ : ಹೆಚ್​​​ಡಿಕೆ​​

ಬೆಂಗಳೂರು : ಇಂದು ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾತನಾಡಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ‌ಜೆಡಿಎಸ್ ಕಚೇರಿಯಲ್ಲಿ ಹೇಳಿಕೆ ನೀಡಿದ್ದಾರೆ.

ಸದನದ ಒಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣವು ಕೋವಿಡ್​​​ನಿಂದ,ಕೋವಿಡ್​​​​ಗಾಗಿ, ಕೋವಿಡ್​​​​ಗೋಸ್ಕರ ಮಾಡಿದ ಭಾಷಣವಾಗಿದೆ. ಇಂದು ರಾಜ್ಯಪಾಲರ ಭಾಷಣವು ನೀರಸವಾಗಿತ್ತು. ಅಲ್ಲದೇ ಈ ಸಾರಿ ಬಜೆಟ್​​​ನಿಂದ ಏನನ್ನು ನೀರಿಕ್ಷಿಸಬೇಡಿ ಅಂತ ಈಗಲೇ ತಿಳಿಸಿದಂತಿದೆ  ಹಾಗೂ ಕೋವಿಡ್ ದಾಖಲೆಯನ್ನು ಇಟ್ಟಿರೋ ಭಾಷಣವಷ್ಟೇ ಇಂದಿನ ಅಧಿವೇಶನ ಎಂದರು.

ಇನ್ನು, ಜಮೀರ್ ವಿವಾಧಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡೋದಿಲ್ಲ , ಹಾಗೂ ಆ ವಿಚಾರವನ್ನು ಮಾತನಾಡಲು ಇಷ್ಟಪಡಲ್ಲವೆಂದರು.

RELATED ARTICLES

Related Articles

TRENDING ARTICLES