ಬೆಂಗಳೂರು : ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಅವರ ಭಾಷಣ ಮಂಡಿಸಿರುವ ಬಗ್ಗೆ ಮಾಜಿ ಸಿ ಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯಪಾಲರ ಭಾಷಣ ಅಂದ್ರೆ ಸರ್ಕಾರ ಬರೆದುಕೊಡುವ ಪದ್ಧತಿ. ಅವರ ಭಾಷಣ ಮೂಲಕ ರಾಜ್ಯಪಾಲರ ಮತ್ತು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಲದೇ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಅವರ ಭಾಷಣದಲ್ಲಿ 116 ಪ್ಯಾರ ಇದೆ. ಬರೀ ಸುಳ್ಳು, ಭರವಸೆ, ಹಳೆ ಪ್ರೋಗ್ರಾಂ, ಇನ್ನು ನಮ್ಮ ಯೋಜನೆ ಕೆಲವು ಇದೆ. ಹಿಂದಿನ ವರ್ಷಗಳ ಸಾಧನೆ, ಮುಂದಿನ ವರ್ಷದ ಮುನ್ನೋಟ ಇರಬೇಕು. ಅವ್ಯಾವು ಕೂಡ ರಾಜ್ಯಪಾಲರ ಭಾಷಣದಲ್ಲಿ ಇಲ್ಲ. ಕೊರೋನಾ ವಿಚಾರದಲ್ಲಿ ಸುಳ್ಳು ಹೇಳಿಸಿದ್ದಾರೆ. ಮೊದಲ ಅಲೆಯಲ್ಲಿ ಸರಿಯಾಗಿ ನಿಭಾಯಿಸದೆ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿದ್ಧತೆ ಮಾಡಿಕೊಳ್ಳದೇ ಸತ್ತಿದ್ದಾರೆ. ನನ್ನ ಪ್ರಕಾರ ನಾಲ್ಕು ಲಕ್ಷ ಜನ ಸತ್ತಿದ್ದಾರೆ.
ಇನ್ನು, ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷ, ಹಾಗೂ ಎಪಿಎಲ್ ಇರುವವರಿಗೆ 50ಸಾವಿರ ಕೊಡಲು ನಿರ್ಧರಿಸಿದ್ದಾರೆ, ಆದರೆ ನಾವು ಒಬ್ಬರಿಗೆ ನಾಲ್ಕು ಲಕ್ಷ ಕೊಡಲು ಮನವಿ ಮಾಡಿದೇವು. ಅಲ್ಲದೇ ಚಾಮರಾಜನಗರ ದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಇನ್ನು ನಮ್ಮ ಕೆಲವು ಯೋಜನೆಗೆ ಹೆಸರು ಬದಲಿಸಿದ್ದಾರೆ. ಬಾಪೂಜಿ ಸೇವಾ ಕೇಂದ್ರವನ್ನ, ಗ್ರಾಮಾ ಒನ್ ಕೇಂದ್ರ ಅಂತ ಮಾಡಿದ್ದಾರೆ. ದುಡ್ಡಿಲ್ಲ ಇನ್ನೆಲ್ಲಿಂದ ಇಂಪ್ರೂವ್ ಆಗಲಿದೆ ಎಂದು ಸರ್ಕಾರದ ಕಿಡಿಕಾರಿದ್ದಾರೆ.
ಕರೋನಾದಲ್ಲಿ ಸತ್ತವರಿಗೆ ಸಾಂತ್ವನ ಹೇಳುವ ಕೆಲಸ ಆಗಬೇಕಿತ್ತು, ಏನೂ ಆಗಲಿಲ್ಲ. ರಾಜ್ಯದಲ್ಲಿ ನಿರುದ್ಯೋಗ, ಹಣಕಾಸು, ನೀರಾವರಿ ಸಮಸ್ಯೆ ಇದೆ ಅದರ ಉಲ್ಲೇಖವೇ ಆಗಿಲ್ಲ. ಕಲ್ಯಾಣ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಬಗ್ಗೆ ಹಣ ನೀಡೋ ಬಗ್ಗೆ ಉಲ್ಲೇಖವೇ ಇಲ್ಲ. ಈ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲವೆಂದು ಸಿದ್ದರಾಮಯ್ಯ ಗುಡುಗಿದ್ದಾರೆ.