Monday, December 23, 2024

‘ಇಬ್ರಾಹಿಂ ಭ್ರಷ್ಟಾಚಾರದ ನಂ. 1 ರಾಜಕಾರಣಿ’ : ಕಾಂಗ್ರೆಸ್ ವಕ್ತಾರ ಉಗ್ರಪ್ಪ

ಶಿವಮೊಗ್ಗ: ಮಾಜಿ ಸಂಸದ, ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಮತ್ತು ಸಿ.ಎಂ. ಇಬ್ರಾಹಿಂ ವಿರುದ್ಧ ವಾಗ್ದಾಳಿ ಸಮರ ಶುರುವಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಉಗ್ರಪ್ಪ ಸಿ ಎಂ ಇಬ್ರಾಹಿಂ ನನ್ನನ್ನು ನಾಯಿಗೆ ಹೋಲಿಸುತ್ತಾರೆ. ಆದರೆ, ಅವರಿಗೆ ಏನು ಗೊತ್ತು ನಾಯಿಗೆ ಇರುವ ನಿಯತ್ತು ಕೂಡ ಅವರ ಹತ್ತಿರ ಇಲ್ಲ. ಅಲ್ಲದೇ ನನ್ನ ಗಂಡಸ್ತನ ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸುತ್ತೇನೆ. ಇಬ್ರಾಹಿಂ ಧರ್ಮದ ಹೆಸರಿಗೆ ಸೇರಿದ ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಕೆ ಮಾಡಿಕೊಂಡಿದ್ದಾರೆ , ನಾನು ಇಂದೇ ಸಿ ಎಂ ಇಬ್ರಾಹಿಂಗೆ ಸಾರ್ವಜನಿಕ ಚರ್ಚೆಗೆ ಬರಲು ಸವಾಲು ಹಾಕುತ್ತೇನೆ ಧೈರ್ಯ ಇದ್ದರೇ ಬರಲಿ ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

ಇನ್ನು, ನೀನು ಇದ್ದ ಪಕ್ಷಕ್ಕೂ ನಿನಗೆ ನಿಷ್ಠೆ ಇಲ್ಲ. ನೀನು ಜನ್ಮ ತಾಳಿದ ಸಮಾಜಕ್ಕೂನ ನಿಷ್ಠೆ ಇಲ್ಲ. ಭ್ರಷ್ಟಾಚಾರದ ನಂ. 1 ರಾಜಕಾರಣಿ ಇದ್ದರೆ, ಅದು ಸಿ.ಎಂ. ಇಬ್ರಾಹಿಂ ಎಂದು ಕಿಡಿಕಾರಿದರು. ಒಬ್ಬ ರಾಜಕಾರಣಿ, ಮೌಲ್ಯ ಇಟ್ಟುಕೊಳ್ಳಬೇಕಾಗುತ್ತದೆ. ಎಲ್ಲಿ ಹೋದರೂ ಅವರು ಒಂದು ಕೈಯಲ್ಲಿ ಬೆಂಕಿ ಪೊಟ್ಟಣ ಮತ್ತು ಮತ್ತೊಂದು ಕೈಯಲ್ಲಿ ಸೀಮೆಎಣ್ಣೆ ಹಿಡಿದುಕೊಂಡು ಹೋಗಿರುತ್ತಾರೆ.

ನಾನೊಬ್ಬ ವಕೀಲನಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ಇಬ್ರಾಹಿಂಗೆ ತಾಕತ್ತು, ಧಮ್ ಇದ್ದರೆ, ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ತನ್ನ ಜೀವನದಲ್ಲಿ ಒಂದೇ ಒಂದು ಚುನಾವಣೆ ಗೆದ್ದು, ಈ ರೀತಿ ಮಾತನಾಡುತ್ತಾರೆ ಅವರೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತು ರೊಲ್ಯಾಕ್ಸ್ ವಾಚ್, ಹಣ, ಎಲ್ಲಿಂದ ಬರುತ್ತೆ ಎನ್ನೋದು ಗೊತ್ತಿದೆ. ಸಿ.ಎಂ ಇಬ್ರಾಹಿಂ ಒಬ್ಬ ದೊಡ್ಡ ಬ್ಲ್ಯಾಕ್ಮೇಲ್ ರಾಜಕಾರಣಿ ಎಂದು ಉಗ್ರಪ್ಪ  ಇಬ್ರಾಹಿಂ ವಿರುದ್ಧ ವಾಗ್ದಳಿ ನಡೆಸಿದರು.

RELATED ARTICLES

Related Articles

TRENDING ARTICLES