ಈ ಬಾರಿಯ ಮೊದಲ ಅದಿವೇಶನಕ್ಕೆ ಸೋಮವಾರ ವಿಧಾನಸೌಧ ಸಾಕ್ಷಿಯಾಗಲಿದೆ. ಫೆಬ್ರವರಿ 14 ರಂದು ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ.. ಉಭಯ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ.
ಸದ್ಯ ಅದಿವೇಶನಕ್ಕೆ ಆಗಮಿಸಲಿರುವ ರಾಜ್ಯಪಾಲರ ಸ್ವಾಗತಕ್ಕೆ ಸಕಲ ಸಿದ್ದತೆ ಮಾಡಿಕೊಂಡಿರೋ ಸಚಿವಾಲಯದ ಸಿಬ್ಬಂದಿ ಪೊಲೀಸ್ ಬ್ಯಾಂಡ್, ಅಶ್ವದಳದಿಂದ ತಾಲೀಮು ಸಹ ನಡೆಸಿದ್ರು.. ತಾಲೀಮು ನಡೆಸುವ ವೇಳೆ ವಿಧಾನಸೌಧದ ಸಿಬ್ಬಂದಿಯ ಮಕ್ಕಳು ರಾಷ್ಟ್ರಗೀತೆಗೆ ಸಲ್ಯೂಟ್ ಮಾಡಿ, ಗೌರವ ಸಲ್ಲಿಸಿದ್ರು..
ಇದಲ್ಲದೆ ಈ ಬಾರಿ ರಾಜ್ಯಪಾಲರನ್ನು ವಿಧಾನಸೌಧ ಗ್ರ್ಯಾಂಡ್ ಸ್ಟ್ಯಾಪ್‌ಗಳ ಮೂಲಕ ಸದನಕ್ಕೆ ಕರೆತರಲು ಭರ್ಜರಿ ತಯಾರಿ ನಡೆಸಲಾಗಿದೆ. ರಾಜ್ಯಪಾಲರು ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನಿಸಿದ್ದಾರೆ.
ಹತ್ತು ದಿನಗಳ ಕಾಲ ನಡೆಯುವ ಅಧಿವೇಶನಲ್ಲಿ, ಎರಡು ಮಸೂದೆಗಳು ಮಂಡನೆಯಾಗಲಿವೆ.. ಸ್ವೀಕರ್ ಅದೇಶದಂತೆ ಈಗಾಲೇ ಕರ್ನಾಟಕ ಸ್ಟ್ಯಾಂಪ್ ವಿಧೇಯಕ ಹಾಗೂ ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ ಸ್ವೀಕರ್ ಕಚೇರಿ ತಲುಪಿವೆ.. ಇದಲ್ಲದೆ ಒಟ್ಟು 2062 ಪ್ರಶ್ನೆಗಳು ಬಂದಿವೆ..ಇದು ಹೊರತಾಗಿ ಈ ಬಾರಿ ಸದನದಲ್ಲಿ ಹಿಜಾಬ್ ಭಾರಿ ಸದ್ದು ಮಾಡುವ ಸಾಧ್ಯತೆ ದಟ್ಟವಾಗಿದೆ.. ಜೊತೆ ಸರ್ಕಾರದ ಕೆಲ ಹುಳುಕುಗಳನ್ನು ವಿಪಕ್ಷ ನಾಯಕರು ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.. ಇದರ ಹೊರತಾಗಿ ಸದನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಎಂದಿನಂತೆ ಕೊವಿಡ್ ರೂಲ್ಸ್ ಫಾಲೋ ಮಾಡುವುದು ಕಡ್ಡಾಯವಾಗಿದೆ..
ಇನ್ನು ಹನ್ನೊಂದು ಗಂಟೆಗೆ ರಾಜ್ಯಪಾಲರ ಭಾಷಣ ಮಾಡಲಿದ್ದಾರೆ. ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ನಂತರದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ಚರ್ಚೆ ಪ್ರಾರಂಭವಾಗಲಿದೆ.
ರಾಜ್ಯಪಾಲರ ಭಾಷಣವನ್ನು ಪ್ರತಿಪಕ್ಷಗಳ ಹೇಗೆ ಸ್ವೀಕಾರ ಮಾಡಲಿವೆ ಎಂಬ ಒಂದಷ್ಟು ಕುತೂಹಲ ಕೆರಳಿದೆ. ಇದೆ ಸಂದರ್ಭದಲ್ಲಿ ಈ ಬಾರಿ ಅಧಿವೇಶನದಲ್ಲಿ ಚುನಾವಣೆಯ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಲು ಸ್ಪೀಕರ್ ಸಿದ್ದತೆ ನಡೆಸಿದ್ದಾರೆ. ಇದನ್ನು ಬಿಎಸಿ ಕಮಿಟಿ ಮುಂದೆ ಮಂಡಿಸಿ ಅನುಮತಿ ಪಡೆಯಲು ಮುಂದಾಗಿದ್ದಾರೆ. ಆದ್ರೆ ಪ್ರತಿಪಕ್ಷ ಕಾಂಗ್ರೆಸ್ ಕಳೆದ ಬಾರಿ ಸಂವಿಧಾನದ ಮೌಲ್ಯಗಳ ಚರ್ಚೆ ನಡೆದಾಗ, ಸರ್ಕಾರ ಮತ್ತು ಸ್ಪೀಕರ್ ಸಂಪ್ರದಾಯ ಮುರಿದಿದ್ದಾರೆ ಎಂದು ತಿರಸ್ಕಾರ ಮಾಡಿತ್ತು. ಜೊತೆಗೆ ಸದನದಲ್ಲಿ ಗದ್ದಲ ಮಾಡಿದ್ದರು.. ಹಾಗಾಗಿ ಚುನಾವಣೆಯ ಸುಧಾರಣೆಗಳ ಬಗ್ಗೆ ಪ್ರಸ್ತಾಪವಾದ್ರೆ ಗದ್ದಲ ಸೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಪರಿಷತ್‌ನಲ್ಲೂ ಸಹ ಸಕಲ ಸಿದ್ಧ ಮಾಡಿಕೊಳ್ಳಲಾಗಿದೆ.. ಆದರೆ, ಈ ಬಾರಿ ಪರಿಷತ್‌ನ ಮತ್ತೊಂದು ವಿಶೇಷ ಎಂದ್ರೆ ಧರಣಿ ಮಾಡುವಾಗ ಬಿತ್ತಿ ಪತ್ರ ಪ್ರದರ್ಶನ ಮಾಡುವಂತಿಲ್ಲ, ಘೋಷಣೆ ಕೂಗುವಂತಿಲ್ಲ. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಗೆ ಇದು ಮೂರನೇ ಅಧಿವೇನ ಆಗಿದೆ.. ಆದರೆ ಕೆಲ ಬಿಜೆಪಿ ಮೂಲಗಳ ಪ್ರಕಾರ ಸಿಎಂ ಆಗಿ ಬೊಮ್ಮಾಯಿಗೆ ಇದು ಕೊನೆ ಅಧಿವೇಶನ ಎಂದು ಹೇಳ್ತಿರೋದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..
ಒಟ್ಟಿನಲ್ಲಿ ಸೋಮವಾರದಿಂದ ಜಂಟಿ ಅಧಿವೇಶನ ಆರಂಭವಾಗ್ತಿದ್ದು, ಸಾಕಷ್ಟು ಬಿಸಿ ಬಿಸಿ ಚರ್ಚೆಯಾಗಲಿವೆ.. ಇನ್ನು, ಹಿಜಾಬ್ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.