Sunday, June 2, 2024

ಕಮಿಷನ್‌ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಶಾಸಕ ಹಾಲಪ್ಪಆಣೆ-ಪ್ರಮಾಣ

ಮಂಗಳೂರು : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿದಂತ ಭ್ರಷ್ಟಾಚಾರ ಆರೋಪ ಕುರಿತಂತೆ ಶಾಸಕ ಹರತಾಳು ಹಾಲಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ, ತಾವು, ತಮ್ಮ ಕುಟುಂಬ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಅಂತ ಆಣೆ ಮಾಡಿದ್ದಾರೆ.

ಈ ಮೂಲಕ ಮಾಜಿ-ಹಾಲಿ ಶಾಸಕರ ನಡುವಿನ ಆಣೆ-ಪ್ರಮಾಣಕ್ಕೆ ಕೊನೆಗೂ ಮುಕ್ತಾಯಗೊಂಡಿದೆ. ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ, ನಾವು ಯಾವುದೇ ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ.

ಇನ್ನೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿರುವಂತ ಆರೋಪಗಳ ಬಗ್ಗೆ ಸಾಕ್ಷಿಗಳಿದ್ದರೇ ಲೋಕಾಯುಕ್ತಕ್ಕೆ ಇಲ್ಲವೇ ಎಸಿಬಿಗೆ ದೂರು ನೀಡಲಿ. ಆ ಮೂಲಕ ಕೇಸ್ ದಾಖಲಿಸಲಿ ಎಂದು ಸವಾಲ್ ಹಾಕಿದ್ದಾರೆ. ಇತ್ತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಆಣೆ-ಪ್ರಮಾಣಕ್ಕಾಗಿ ಧರ್ಮಸ್ಥಳಕ್ಕೆ ತೆರಳಿದ್ದು, ಶಾಸಕ ಹರತಾಳು ಹಾಲಪ್ಪ ಕುರಿತಂತೆ ಮಾಡಿದಂತ ಆರೋಪದ ಬಗ್ಗೆ ಏನ್ ಆಣೆ-ಪ್ರಮಾಣ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಮೂಲಕ ಮಾಜಿ-ಹಾಲಿಗಳ ಆಣೆ-ಪ್ರಮಾಣ ಮುಕ್ತಾಯವಾಗಲಿದೆ.

RELATED ARTICLES

Related Articles

TRENDING ARTICLES