ಎಚ್‌ಐವಿ ಸೋಂಕು ಕಂಡುಹಿಡಿದಿದ್ದಕ್ಕೆ 2008ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಫ್ರೆಂಚ್ ಸಂಶೋಧಕ, ವಿಜ್ಞಾನಿ ಲುಕ್ ಮೊಂಟಾಗ್ನಿಯರ್ ( 89 ) ನಿಧನರಾಗಿದ್ದಾರೆ.
ನ್ಯೂಲ್ಲಿ-ಸುರ್-ಸೈನ್‌ನಲ್ಲಿರುವ ಅಮೆರಿಕನ್ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಮೊಂಟಾಗ್ನಿಯರ್ ನಿಧನರಾದರು ಎಂದು ತಿಳಿದು ಬಂದಿದೆ. ಆದ್ರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.1932ರಲ್ಲಿ ಮಧ್ಯ ಫ್ರಾನ್ಸ್‌ನ ಚಾಬ್ರಿಸ್ ಗ್ರಾಮದಲ್ಲಿ ಜನಿಸಿದ ಮೊಂಟಾಗ್ನಿಯರ್ ವೈರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
1983ರಲ್ಲಿ ಏಡ್ಸ್‌ಗೆ ಕಾರಣವಾಗುವ ಮಾನವ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ ಅನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದಾರೆ. ಈ ಮೂಲಕ 2008ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.
ನೊಬೆಲ್ ಪ್ರಶಸ್ತಿ ವೆಬ್‌ಸೈಟ್‌ನಲ್ಲಿರುವ ಇವರ ಆತ್ಮಚರಿತ್ರೆಯ ಪ್ರಕಾರ, ಮೊಂಟಾಗ್ನಿಯರ್ ಪೊಯಿಟಿಯರ್ಸ್ ಮತ್ತು ಪ್ಯಾರಿಸ್‌ನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ್ದಾರೆ. 1960ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ (CNRS)ಗೆ ಸೇರಿದರು ಮತ್ತು 1972 ರಲ್ಲಿ ಪಾಶ್ಚರ್ ಇನ್ಸ್ಟಿಟ್ಯೂಟ್‌ನ ವೈರಾಲಜಿ ವಿಭಾಗದ ಮುಖ್ಯಸ್ಥರಾಗಿ ನೇಮಕವಾದರು.