ಬೆಂಗಳೂರು : ಹಿಜಾಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂಗೆ ಹೋಗೋರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಲಾಯರ್ಗಳನ್ನು ಇಟ್ಟು ಕೋರ್ಟ್‍ನಲ್ಲಿ ವಾದ ಮಾಡೋ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ಹುಡುಗಿಯರಿಗೂ ಆ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು. ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸ್ತಾ ಇದ್ದಾರೆ.
ಶಕ್ತಿ ಭವನದಲ್ಲಿ ಶಿಕ್ಷಣ ಸಚಿವ ನಾಗೇಶ್ ಹಿಜಾಬ್ ವಿಚಾರ ಕೋರ್ಟ್ ಗೆ ಬಂದಿದೆ , ಕೋರ್ಟ್ ಆರ್ಡರ್ ಬರೋಕು ಮುನ್ನ ಶಾಲೆಗಳಲ್ಲಿ ಗಲಾಟೆ ಆಗಿದೆ. ಆದ್ದರಿಂದ ಮಕ್ಕಳು ರಾಜಕೀಯದ ಶಕ್ತಿ ಉಪಯೋಗಿಸಬಾರದು ಅಂತ ಮೂರು ದಿನ ಶಾಲೆ ಕ್ಲೋಸ್ ಮಾಡಿದ್ವಿ, ಆದರೆ ಕೋರ್ಟ್ ಶಾಲೆ ಮುಂದುವರೆಸಿ ಎಂದು ಹೇಳಿದೆ. ಸೋಮವಾರ ಸರ್ಕಾರದ ಸೂಚನೆಯಂತೆ ಹೈ ಸ್ಕೂಲ್ ಶುರುವಾಗಲಿದೆ.ಶಾಲೆಗೆ ಸಮವಸ್ತ್ರ ಧರಿಸಬೇಕು ಧರ್ಮ ಸೂಚಿಸುವ ವಸ್ತ್ರ ಹಾಕುವಂತಿಲ್ಲ ಅಂದಿದ್ದಾರೆ, ಆದ್ದರಿಂದ ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಎಂದು ಸ್ಪಷ್ಟಪಡಿಸಿದರು.