Monday, December 23, 2024

ಈಶ್ವರಪ್ಪ ಇಲ್ಲಿರೋಕೆ ನಾಲಾಯಕ್ : ಸಿದ್ದರಾಮಯ್ಯ

ಬೆಂಗಳೂರು : ಈಶ್ವರಪ್ಪ ಬುಧವಾರ ಕೇಸರಿ ಧ್ವಜ ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಹಾರಿಸ್ತೇವೆ, ಇವತ್ತಲ್ಲ, ನಾಳೆ ಕೆಂಪು ಕೋಟೆಯ ಮೇಲೆ ತ್ರಿವರ್ಣಧ್ವಜ ಕೂಡ ಹಾರಿಸುತ್ತೇವೆ ಎಂಬ ವಿಚಾರವಾಗಿ ಇಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕೆಂಪುಕೋಟೆ ಮೇಲೆ ಕೇಸರಿ‌ ಧ್ವಜ ಹಾರಿಸುವ ವಿಚಾರವಾಗಿ ಸಿದ್ದರಾಮಯ್ಯ  ಸಚಿವ ಈಶ್ವರಪ್ಪನ ಮೇಲೆ ಕೆಂಡಾಮಂಡಲವಾಗಿದ್ದಾರೆ ಹಾಗೂ ಈಶ್ವರಪ್ಪ ಇಲ್ಲಿರೋಕೆ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪಗೆ ಗೌರವವಿಲ್ಲ. ರಾಷ್ಟ್ರಧ್ವಜದ ಬಗ್ಗೆ ಮಾಡುತ್ತಿರುವ ಅಪಮಾನ ಸರಿಯಲ್ಲ ಅಲ್ಲದೇ ಅದಕ್ಕೆ ಅಗೌರವ ತೋರುವುದು ಸರಿಯಲ್ಲ ಎಂದು ಹೇಳಿದರು. ಕೆ.ಎಸ್. ಈಶ್ವರಪ್ಪಗೆ ರಾಷ್ಟ್ರಧ್ವಜದ ಬಗ್ಗೆ ಅರಿವಿದಿದ್ದರೇ ತಾನೇ. ನೋಡೋಣ ಸದನದಲ್ಲಿ ಇದನ್ನ‌ ಪ್ರಸ್ತಾಪಿಸುತ್ತೇನೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES