Wednesday, January 22, 2025

ಪ್ರಚೋದನೆ ನೀಡದೆ ಶಾಂತಿಯಿಂದ ವರ್ತಿಸೋಣ -ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದೆ. ಸದ್ಯ ಇಡೀ ರಾಜ್ಯ ಕೋರ್ಟ್ ತೀರ್ಮಾನಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ.

ಯಾರೂ ಪ್ರಚೋದನೆ ನೀಡದೆ ಶಾಂತಿಯಿಂದ ವರ್ತಿಸೋಣ. ಪ್ರಕರಣ ಕೋರ್ಟ್​ನಲ್ಲಿರುವುದರಿಂದ ಎಲ್ಲರೂ ತೀರ್ಪು ಬರುವವರೆಗೂ ಕಾಯೋಣ. ಈ ವಿಷಯದಲ್ಲಿ ಈಗಾಗಲೇ ಹಲವರು ಹೇಳಿಕೆ ಕೊಟ್ಟಿದ್ದಾರೆ. ಇನ್ಮುಂದೆ ಯಾರೂ ಹೇಳಿಕೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಹಿಜಾಬ್ ಬಗ್ಗೆ ಇಂದು ಸಂಜೆ ಶಿಕ್ಷಣ ಸಚಿವರು, ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಈ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರ ಜತೆಯೂ ಮಾತುಕತೆ ನಡೆಸುತ್ತೇನೆ. ಮೊದಲಿನಂತೆ ಸೌಹಾರ್ದತೆ, ಶಿಸ್ತು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಿಎಂ ಬೊಮ್ಮಾಯಿ, ರಜೆ ಮುಂದುವರಿಕೆ ಬಗ್ಗೆ ಸಂಜೆ ನಿರ್ಧಾರ ಮಾಡುತ್ತೇವೆ. ಮಕ್ಕಳ ವಿಚಾರದಲ್ಲಿ ನಾವು ಸಂವೇದನಾಶೀಲರಾಗಿರಬೇಕು ಅಂತ ಅಭಿಪ್ರಾಯಪಟ್ಟರು.

 

RELATED ARTICLES

Related Articles

TRENDING ARTICLES