ಬೆಂಗಳೂರು : ಶಿವಮೊಗ್ಗದ ಮಂತ್ರಿ ಮಗ ಕೇಸರಿ ಶಾಲುಗಳನ್ನು ತರಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿರುವ ಬೆನ್ನಲ್ಲೇ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕೇಸರಿ ಶಾಲು ಹಂಚಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚ್ತೇನೆ, ನನ್ನ ಸ್ವಾತಂತ್ರ್ಯ ಕೇಳಲು ಶಿವಕುಮಾರ್ಗೆ ಅಧಿಕಾರ ನೀಡಿದ್ದು ಯಾರು? ಬಂಡೆ ಲೂಟಿ ಮಾಡಿದ ವ್ಯಕ್ತಿ ಶಿವಕುಮಾರ್, ತಿಹಾರ್ ಜೈಲಿಗೆ ಹೋಗಿ ಬಂದವರು ಶಿವಕುಮಾರ್. ED ದಾಳಿ ಕೂಡ ಶಿವಕುಮಾರ್ ಮೇಲೆ ಆಗಿತ್ತು, ಶಿವಕುಮಾರ್ಗೆ ತಾಕತ್ತು, ಧಮ್ ಇದ್ರೆ ಮಸೀದಿಗೆ ಗುಲ್ಬಾರ್ಗಾ ಶಾಸಕಿಯನ್ನ ಕರ್ಕೊಂಡು ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಸರಿ ಶಾಲು ಪೇಟಗಳನ್ನ ಧರಿಸುವುದು ನಮ್ಮ ಹಕ್ಕು. ಕೇಸರಿ ಧರಿಸಿ ಎಲ್ಲಿ ಬೇಕಾದರೂ ಹೋಗುವಂತಹ ಅಧಿಕಾರ ನಮಗಿದೆ. ಆದರೆ ಶಾಲೆಯಲ್ಲಿ ಎಲ್ಲರೂ ಸಮಾನರೇ ಅವರು ಸಮವಸ್ತ್ರ ಧರಿಸುವುದು ಸೂಕ್ತ ಎಂದಿದ್ದಾರೆ.
ಕೇಸರಿ ಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೇಸರಿ ಧ್ವಜವನ್ನು ಪ್ರಪಂಚದ ಯಾವ ಭಾಗದಲ್ಲಿ ಬೇಕಾದರೂ ಹಾರಿಸುತ್ತೇವೆ. ಅದನ್ನ ಕೇಳೊದಕ್ಕೆ ಇವರ್ಯಾರು. ಅವರು ಹೇಳಿದ ಹಾಗೇ ನಾವು ಸುಳ್ಳು ಹೇಳುವುದಿಲ್ಲಾ, ನಾವು ಕೇಸರಿ ಧ್ವಜ ಹಾರಿಸುವವರೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು, ಹಿಜಾಬ್ ಹಿಂದೆ ಸಂಘ ಪರಿವಾರದ ನಾಯಕರು ಇದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಕೆಂಡಾಮಂಡಲರಾದರು, ಯಾವನೋ ಕುಡುಕ ಹೇಳ್ತಾನೆ ಅಂತಾ ನಂಬ್ತೀರಾ ಎಂದು ಸಿದ್ದರಾಮಯ್ಯ ಕುಡುಕನಾ ಎಂದು ವ್ಯಂಗ ಮಾಡಿದ್ದಾರೆ.
ಕೇಸರಿ ಧ್ವಜ ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಹಾರಿಸ್ತೇವೆ, ಇವತ್ತಲ್ಲ,ನಾಳೆ ಕೆಂಪು ಕೋಟೆಯ ಮೇಲೆ ತ್ರಿವರ್ಣಧ್ವಜ ಕೂಡ ಹಾರಿಸುತ್ತೇವೆ. ಡಿಕೆ ಶಿವಕುಮಾರ್ ಸಿದ್ಧರಾಮಯ್ಯನನ್ನು ಮೀರಿಸಿದ ಸುಳ್ಳುಗಾರಗುತ್ತಾರೆ. ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿಲ್ಲ, ಶಿವಕುಮಾರ್ಗಿಂತ ಹೆಚ್ಚಿನ ದೇಶ ಭಕ್ತಿ ನನಗಿದೆ. ಕಾಂಗ್ರೆಸ್ನವರು ಹಿಂದೂಸ್ಥಾನವನ್ನು ಪಾಕಿಸ್ತಾನವಾಗಿ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.