ಬೆಂಗಳೂರು : ಹಿಜಾಬ್ ವಿವಾದದ ಬಗ್ಗೆ ಇಂದು ಹೈಕೋರ್ಟ್ ತನ್ನ ಮಹತ್ವದ ಆದೇಶ ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಮಾತನಾಡಿದ್ದು ಕೋರ್ಟ್ ಯಾವುದೇ ತೀರ್ಪು ಕೊಟ್ಟರು ಸರ್ಕಾರ ಮಾನ್ಯತೆ ಮಾಡುತ್ತದೆ.
ಇದೇ ರೀತಿಯ ತೀರ್ಪು ಬರುತ್ತದೆ ಎಂದು ಹೇಳಲು ಆಗಲ್ಲ. ಕೋರ್ಟ್ ತೀರ್ಪು ನೋಡಿಕೊಂಡು ಸರ್ಕಾರ ಮುಂದಿನ ತೀರ್ಮಾನ ಮಾಡುತ್ತದೆ. ಯಾವುದೇ ತರಹದ ತೊಂದರೆ ಆಗದಂತೆ ಗೃಹ ಇಲಾಖೆ ಕ್ರಮ ತೆಗೆದುಕೊಂಡಿದೆ. ರಾಜ್ಯದ ಕಾಲೇಜುಗಳ ಸ್ಥಿತಿಗತಿ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ನೀಡಿದ್ದೀವಿ.
ಇಷ್ಟು ಹಠವಾಗಿ ಹೆಣ್ಣುಮಕ್ಕಳು ವಿದ್ಯೆಗಿಂತ ಧರ್ಮವೇ ಮುಖ್ಯ ಎಂದು ಕುಳಿತಿದ್ದಾರೆ. ಇದನ್ನು ನೋಡಿದರೆ ದೇಶ ವಿಭಜನೆ ಮಾಡುವ ದುಷ್ಟ ಶಕ್ತಿಗಳು ವಿದ್ಯಾರ್ಥಿಗಳ ಮನಸ್ಸನ್ನು ಕೆಟ್ಟ ಮನಸ್ಸುಗಳಾಗಿ ಮಾಡಿ ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಆಕ್ರೋಶಗೊಂಡಿದ್ದಾರೆ.