Thursday, December 26, 2024

ಹಿಜಾಬ್​​ ಹಿಂದೆ ಕಾಣದ ‘ಕೈ’ : ಸಚಿವ ಆರ್.ಅಶೋಕ್

ಬೆಂಗಳೂರು : ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ, ಹಿಜಾಬ್ ಗಲಾಟೆಗೆ ಕಾಂಗ್ರೆಸ್ ಪ್ರೇರಪಣೆ ನೀಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಕರ್ನಾಟಕದಲ್ಲಿ ಹಿಜಾಬ್ ಗಲಾಟೆಗೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಪಕ್ಷ ಒಂದು ವರ್ಗಕ್ಕೆ ಪ್ರೇರಪಣೆ ನೀಡುತ್ತಿದೆ. ಕಾಂಗ್ರೆಸ್​​​ನ ಇನ್ನೊಂದು ವರ್ಗ ಎರಡೂ ಕಡೆ ಇದೆ. ಕಾಂಗ್ರೆಸ್ ಪಕ್ಷ ಎರಡೂ ಕಡೆ ಇರುವುದು ಒಳ್ಳೆಯದಲ್ಲ. ಕಾಂಗ್ರೆಸ್ ಯಾರ ಪರ ಇದೆ ಎಂದು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್​​ಗೆ ಏನು ಬೇಕು ಅದನ್ನು ಹೇಳುತ್ತಿದ್ದಾರೆ. ಧ್ವಜವನ್ನು ಯಾರೂ ಇಳಿಸಿಲ್ಲ ಆದರೆ ಧ್ಚಜಸ್ತಂಭದಲ್ಲಿ ಕೇಸರಿ ಭಾವುಟ ಹಾರಿಸಿದ್ದು ತಪ್ಪು. ಹಿಜಾಬ್ ಮತ್ತು ಕೇಸರಿ ಎರಡೂ ಕೂಡ‌ ಕಾಲೇಜು ಕ್ಯಾಂಪಸ್​​​ನಲ್ಲಿ ಬರಬಾರದು. ಮತ್ತು ಈ ಪ್ರಕರಣದ ಹಿಂದೆ ಕಾಂಗ್ರೆಸ್​​ನ ಷಡ್ಯಂತ್ರ ಇದೆ ಹಾಗೂ ಕಾಂಗ್ರೆಸ್​​ ಒಂದು ವರ್ಗಕ್ಕೆ ಪ್ರಚೋದನೆ ನೀಡುತ್ತದೆ ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ ಎಂದು ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಲಿ ಯಾವ ಪರ ಇದೆ ಅಂತಾ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES