Wednesday, January 22, 2025

ಹಿಜಾಬ್ ವಿವಾದ; ಶಾಸಕರೆದುರೇ ವಿದ್ಯಾರ್ಥಿಯ ಮೇಲೆ ಹಲ್ಲೆ

ಸಾಗರ: ಕಡೆಗೂ ಏನು ಆಗಬಾರದೆಂದುಕೊಂಡಿದ್ದೆವೊ ಅದು ಆಗಿಯೇಹೋಗಿದೆ. ಎರಡೂ ಕೋಮುಗಳ ನಡುವಿನ ಗಲಾಟೆ ಹೊಡೆದಾಟದಲ್ಲಿ, ಅದೂ ಶಾಸಕರೊಬ್ಬರ ಕಣ್ಣೆದುರಿನಲ್ಲೇ ನಡೆದುಹೋಗಿದೆ. ಅನ್ಯಕೋಮಿನ ವಿದ್ಯಾರ್ಥಿಯನ್ನು ಒಂದು ಕೋಮಿನ ವಿದ್ಯಾರ್ಥಿಗಳು ಶಾಸಕರೆದುರೆ ಥಳಿಸಿದರೂ, ಯಾರೂ ಮಾತಾಡದೆ ಮೂಕ ಪ್ರೇಕ್ಷಕರಾಗಿದ್ದಾರೆ.

ಈ ಘಟನೆ ನಡೆದಿರುವುದು ಸಾಗರದ ಸರಕಾರಿ ಕಾಲೇಜಿನಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಹಾಗು ಕೇಸರಿ ಶಾಲು ವಿವಾದನ ತಾರಕಕ್ಕೇರಿ ಗಲಾಟೆಯಲ್ಲಿ ಒರ್ವ ವಿದ್ಯಾರ್ಥಿಗೆ ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿ ಆರೋಗ್ಯ ವಿಚಾರಿಸಲು ಶಾಸಕರು ಆಸ್ಪತ್ರೆಗೆ ತೆರಳಿದ್ದ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಶಾಸಕ ಹಾಲಪ್ಪನವರ ಎದುರಿನಲ್ಲೇ ಹಿಂದು ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ನಡುವೆ ವಗ್ವಾದ ನಡೆದು, ಮುಸ್ಲಿಂ ವಿದ್ಯಾರ್ಥಿಯ ಮೇಲೆ ಹಿಂದು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಆದರೆ ಇದನ್ನು ನೋಡಿಯೂ ಶಾಸಕರೂ ಮೂಕಪ್ರೇಕ್ಷಕರಾಗಿದ್ದಾರೆ!

RELATED ARTICLES

Related Articles

TRENDING ARTICLES