Friday, November 22, 2024

ಹಿಜಾಬ್​​ ವಿವಾದವನ್ನು ಕಾಂಗ್ರೆಸ್ ಲಾಭಕ್ಕೆ ಬಳಸಿಕೊಳ್ತಿಲ್ಲ : ಯು. ಟಿ. ಖಾದರ್

ಬೆಂಗಳೂರು : ಹಿಜಾಬ್​​ ವಿವಾದದ ವಿಚಾರವಾಗಿ ಕಾಂಗ್ರೇಸ್​​ ಪಕ್ಷದ ಮಾಜಿ ಸಚಿವ ಯು. ಟಿ. ಖಾದರ್ ಹೇಳಿಕೆ ನೀಡಿದ್ದಾರೆ.

ಇವಾಗ ಹೊಸ ಡ್ರೆಸ್ ಕೋಡ್ ತರುವುದಕ್ಕೆ ಸೂಕ್ತವಾದ ಸಮಯವಲ್ಲ. ಹಿಜಾಬ್​​ ವಿಚಾರಣೆಯು ಕೋರ್ಟ್​ನಲ್ಲಿದೆ ಹೀಗೆ ಏಕಾಏಕಿ ಪದ್ಧತಿಯಲ್ಲಿ ಬದಲಾವಣೆ ತರುವುದು ಸರಿಯಲ್ಲ. ಕೋರ್ಟ್ ತೀರ್ಪು ಬಂದ ಮೇಲೆ ನಿರ್ಧರಿಸಿ ಸಮವಸ್ತ್ರ ತರುವುದು ಸೂಕ್ತ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಹಿಜಾಬ್​​ ವಿವಾದವನ್ನು ಕೆಲವರು ಕಾಂಗ್ರೆಸ್ ಪಕ್ಷದ ಅಭಿವೃದ್ದಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷವು ಇದನ್ನ ಲಾಭಕ್ಕೆ ಬಳಸಿಕೊಳ್ಳುತ್ತಿಲ್ಲ, ಆ ರೀತಿ ಹೇಳುವುದು ತಪ್ಪು ವಿಚಾರವಾಗಿದೆ. ಮತ್ತು ಉಡುಪಿ ವಿಚಾರ ಬೇರೆ, ಕುಂದಾಪುರದ್ದು ಬೇರೆ. ಮೊದಲಿನಿಂದ ಶಿರಸ್ತ್ರಾಣ ಹಾಕುತ್ತಿದ್ದಾರೆ, ಅದನ್ನ ಏಕಾಏಕಿ ಬದಲಾಯಿಸೋದು ಏಕೆ ? ಶಿರವಸ್ತ್ರ ಹಾಕಿ ಬಂದವರನ್ನ ಕಾಲೇಜಿನ ಗೇಟ್​​ ಬಳಿ ನಿಲ್ಲಿಸೋದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದಾರೆ.

ಹಿಂದಿನ ಪದ್ಧತಿ ಇದ್ದರೆ ಮುಂದುವರೆಸಲಿ, ಹೊಸದಾಗಿ ಅವರು ಸಮವಸ್ತ್ರ ಕೊಡುವುದು ಬೇಡ ಶಾಲೆ ಮುಂದೆ ವಿದ್ಯಾರ್ಥಿ ಸೇರಲು ಅವಕಾಶ ಕೊಡಬಾರದು ಎಂದು ಯು. ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES