Monday, December 23, 2024

ಹಿಜಾಬ್vs​​​ಕೇಸರಿ : ಸರ್ಕಾರದ ವಿರುದ್ದ ಹೆಚ್​​ಡಿಕೆ ಕಿಡಿ

ಕೇಸರಿ, ಹಿಜಾಬ್ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಕೇಸರಿ ಶಾಲು ಮತ್ತು ಹಿಜಾಬ್ ಬಿಕ್ಕಟ್ಟನ್ನು ಹುಟ್ಟುಹಾಕಿದ್ದು ಸಂಘಪರಿವಾರದವರು. ಇದು ಎಲ್ಲಾ ಜಿಲ್ಲೆಗಳಿಗೆ ಹಬ್ಬಿದೆ. ಎಲ್ಲಾ ಕಾಲೇಜುಗಳಿಗೂ ಹಬ್ಬಿದೆ. ಕೂಡಲೇ ಕಡಿವಾಣ ಹಾಕಬೇಕಾದ ಅವಶ್ಯಕತೆಯಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ,ಜಾತಿ ಸುಳಿಯಬಾರದು. ಇದು ತೀವ್ರವಾದಲ್ಲಿ ಕಾನೂನು ಸುವ್ಯವಸ್ಥೆಯ ವಿಚಾರವಾಗುತ್ತದೆ. ಆ ಕಾರಣದಿಂದ ಆನ್​​ಲೈನ್ ತರಗತಿಗಳನ್ನ ಪ್ರಾರಂಭ ಮಾಡಬೇಕು. ವಿವಾದ ತಿಳಿಯಾದ ಮೇಲೆ ಕಾಲೇಜು ಪ್ರಾರಂಭಿಸಲಿ. ಈಗ ಪರೀಕ್ಷಾ ಸಮಯವಾಗಿದ್ದು, ಕಾಲೇಜು ಮುಚ್ಚೋದರಿಂದಲೂ ತೊಂದರೆಯಾಗುತ್ತದೆ. ಆದ್ದರಿಂದ ಅನ್ ಲೈನ್​​ಕ್ಲಾಸ್ ಪ್ರಾರಂಭ ಮಾಡಿ ಎಂದು ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇನ್ನು, ಹಿಜಾಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ವಿವಾದ ಹಿನ್ನೆಲೆ ಕಲ್ಲು ತೂರಾಟ ಪ್ರಕರಣ ಕುರಿತು ರಾಮನಗರದ ಮಿನಿವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗೆಹರಿಸುವ ಕಮಿಟ್ಮೆಂಟ್ ಇಲ್ಲ. ರಾಜ್ಯದಲ್ಲಿ ಶಾಂತಿಯುತ ವಾತಾವರಣ ಇತ್ತು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ರೀತಿ ಇತ್ತು. ಆದರೆ ಅದನ್ನ ಹಾಳು ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು. ಬಡವರ ಪರವಾಗಿ ಹೋರಾಟ ಮಾಡಿ, ಇದನ್ನು ನಾನು ಎಲ್ಲ ಸಮಾಜದವರಿಗೂ ಹೇಳ್ತೇನೆ. ನಮಗೆ ಶಾಂತಿ ಬೇಕಿದೆ, ಬಡವರ ಬದುಕು ಕಟ್ಟಬೇಕಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES