Wednesday, December 25, 2024

‘ಹಿಜಾಬ್​ಗೆ ನೋ ಎಂಟ್ರಿ’- ಸುನೀಲ್​ಕುಮಾರ್

ಉಡುಪಿ: ಮುಸ್ಲಿಂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಕರೆ ನೀಡಿದ್ದಾರೆ. ಇಸ್ಲಾಂ ನಿಮ್ಮನ್ನು ಬಗ್ಗುಬಡಿಯುವ ಕೆಲಸ ಮಾಡುತ್ತಿದೆ. ನಿಮ್ಮನ್ನು ಮುಸುಕಿನಲ್ಲಿ ಇರಿಸುವಂತಹ ಪ್ರಯತ್ನ ಮಾಡ್ತಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದ ಕನಿಷ್ಠ ಪದ್ಧತಿ ಭಾರತದಲ್ಲಿ ಇದೆ.

ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ತ್ರಿವಳಿ ತಲಾಖ್ ರದ್ದು ಮಾಡಿ ಭದ್ರತೆ ನೀಡಿದ್ದೇವೆ. ಇಂದು ಹಿಜಾಬ್ ಬೇಕು ಎಂದು ಕೇಳುತ್ತಿದ್ದಾರೆ. ನಾಳೆ ಉರ್ದುನಲ್ಲಿ ಪಾಠ ಮಾಡಲು ಒತ್ತಾಯ ಬರಬಹುದು. ವ್ಯವಸ್ಥೆಯಡಿ ಎಲ್ಲವೂ ಸರಿಯಾಗಿ ನಡೆಯಬೇಕು. ಇನ್ನು ಮುಂದೆ ಹಿಜಾಬ್ ಧರಿಸಿ ಶಾಲಾ ಕಾಲೇಜಿಗೆ ಬರುವಂತಿಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಸಮವಸ್ತ್ರದ ಕಾನೂನು ಎಲ್ಲರಿಗೂ ಅನ್ವಯ ಎಂದು ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ರು.

RELATED ARTICLES

Related Articles

TRENDING ARTICLES