Wednesday, January 22, 2025

ಪ್ರತಾಪ ಸಿಂಹ ಮತಾಂತರವಾಗಲಿ : ಶಾಸಕ ತನ್ವೀರ್ ಸೇಠ್

ಮೈಸೂರು : ತನ್ವೀರ್ ಪೂರ್ವಜರು ಮತಾಂತರವಾಗಿದ್ದರು ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ತನ್ವೀರ್ ಸೇಠ್, ‘ಪ್ರತಾಪ ಸಿಂಹ ಕೂಡಾ ಮತಾಂತರವಾಗಲಿ’ ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದ ಪ್ರತಾಪ ಸಿಂಹ ಯಾವ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡಿರಬಹುದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬೇಕಾದರೆ ಅವರೇ ಮತಾಂತರವಾಗಲಿ’ ಎಂದರು. ಸಮವಸ್ತ್ರದ ವಿಚಾರವಾಗಿ ರಾಜ್ಯ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾನೂನು ಬಾಹಿರವಾದ ಆದೇಶ. ಏಕಾಏಕಿಯಾಗಿ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷೀಯವಾದ ನಿರ್ಧಾರ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

RELATED ARTICLES

Related Articles

TRENDING ARTICLES