Monday, December 23, 2024

ಸಚಿವ ಸ್ಥಾನ ಸಿಗೋ ವಿಶ್ವಾಸವಿದೆ : ಆರ್.ಶಂಕರ್

ಹಾವೇರಿ : ಸಂಪುಟ ಪುನರ್ ರಚನೆಯಲ್ಲಿ ಏನ್ ನಿರ್ಧಾರ ಆಗುತ್ತೋ ನೋಡಬೇಕು. ಯಾವುದೇ ಕಾರಣಕ್ಕೆ ನನ್ನ ಕೈ ಬಿಡಲ್ಲ ಅಂತ ಸಿಎಂ ಹೇಳಿದ್ದಾರೆ. ಮೊನ್ನೆ ಕೆಲ ಕಾರಣಗಳಿಂದ ನಿಮಗೆ ಅವಕಾಶ ಕೈ ತಪ್ಪಿತ್ತು. ಈಗ ನಿಮಗೆ ಖಂಡಿತಾ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಖಂಡಿತಾ ಮಾಡ್ತಾರೆ ಅಂತಾ ಭರವಸೆ ನೀಡಿದ್ದಾರೆ. ಮೊನ್ನೆ ಸಿಎಂ ಭೇಟಿ ಮಾಡಿದ್ದೇನೆ. ಈ ಸಾರಿ ಕನ್ಸಿಡರ್ ಮಾಡ್ತೀನಿ ಅಂತಾ ಹೇಳಿದ್ದಾರೆ. ಈ ಬಾರಿ ಖಂಡಿತಾ ವಿಶ್ವಾಸ ಇದೆ ನನಗೆ ಎಂದರು. ಮುಂದೆ ನನಗೆ ವಿಧಾನಸಭೆ ಸ್ಪರ್ಧೆಗೆ ಅವಕಾಶ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಅವರು ಹೇಗೆ ನಿರ್ಣಯ ತೆಗೆದುಕೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES