ನವದೆಹಲಿ: ಪ್ರಗತಿಪರ ವಿಚಾರಧಾರೆಗೆ ಜೊತೆಗೆ ವಿವಾದಗಳಿಗೆ ಹೆಸರಾದ ಜೆಎನ್ಯು ಅಂದರೆ ಜವಾಹರಲಾಲ್ ನೆಹರು ಯುನಿವರ್ಸಿಟಿಗೆ ಮಿನಿಷ್ಟ್ರಿ ಆಫ್ ಎಜುಕೇಶನ್ ಪ್ರಪ್ರಥಮ ಬಾರಿಗೆ ಮಹಿಳಾ ಉಪಕುಲಪತಿಯನ್ನು ನೇಮಕ ಮಾಡಿದೆ.
ಸದ್ಯ ಮಹಾರಾಷ್ಟ್ರದ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ 59 ವರ್ಷದ ಸಂತಿಶ್ರಿ ಧುಲಪುಡಿ ಪಂಡಿತ್ರನ್ನು ಜೆಎನ್ಯುಗೆ ಉಪಕುಲಪತಿಯಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರು ಸಂತಿಶ್ರೀಯವರನ್ನು 5 ವರ್ಷಗಳ ಅವಧಿಗೆ ಉಪಕುಲಪತಿಗಳನ್ನಾಗಿ ನಿಯುಕ್ತಿ ಮಾಡಿದೆ ಎಂದು MoE ಹೇಳಿದೆ.