Monday, December 23, 2024

ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ : ಸಿದ್ದರಾಮಯ್ಯ

ಬೆಂಗಳೂರು : ನಾನು ಹಿಜಾಬ್ ಬಗ್ಗೆ ಮಾತನಾಡಿರುವುದು ನಿಜ. ಆದರೆ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಈಗ ನನ್ನ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇನ್ನು ಇದೇ ವೇಳೆ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ. ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದಲ್ಲಿ ಕೆಲವರು ಸಿ.ಎಂ. ಇಬ್ರಾಹಿಂ ಜೊತೆ ಮಾತನಾಡಿದ್ದಾರೆ. ನಾನು ಕೂಡ ಅವರಿಗೆ ಕೋಪ ಕಡಿಮೆಯಾದ ಬಳಿಕ ಹೋಗಿ ಮಾತನಾಡುತ್ತೇನೆ. ನಾನು ಸಿಎಲ್‌ಪಿ ನಾಯಕ ಅನ್ನೋ ಕಾರಣಕ್ಕೆ ನನ್ನ ಮೇಲೆ ಅವರಿಗೆ ಕೋಪವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಂಡೇ ಕೂಲ್ ಆಗಿಯೇ ಇರಬೇಕಲ್ಲವಾ.!? ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ
ನಾನು ತಲೆಕೆಡಿಸಿಕೊಳ್ಳೋದು ಯಾವಾಗ ಅಂದ್ರೆ ಸಮಾಜದಲ್ಲಿ ಡಿಸ್ಟರ್ಬ್ ಆದಾಗ ಮಾತ್ರ. ಇಲ್ಲ ಅಂದ್ರೆ ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ

RELATED ARTICLES

Related Articles

TRENDING ARTICLES